ಬೆಂಗಳೂರು:ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ, ಪ್ರತಿ ವರ್ಷ ನಡೆಯುತ್ತಿದ್ದ ಬೆಂಗಳೂರು ಕರಗ ರದ್ದಾಗಿದೆ.
ಧರ್ಮರಾಯಸ್ವಾಮಿ ದೇವಸ್ಥಾನದ ಕರಗ ಶಕ್ತ್ಯೋತ್ಸವ ರದ್ದು - ಧರ್ಮರಾಯಸ್ವಾಮಿ ದೇವಸ್ಥಾನ
ಪ್ರತಿ ವರ್ಷ ನಡೆಯುತ್ತಿದ್ದ ಬೆಂಗಳೂರು ಕರಗ ಏಪ್ರಿಲ್ 8ಕ್ಕೆ ನಿಗದಿ ಪಡಿಸಿ ಈಗಾಗಲೇ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಸಿದ್ಧತೆಗಳನ್ನು ನಡೆಸಲಾಗಿತ್ತು. ಆದರೆ, ದೇಶವನ್ನು ಲಾಕ್ ಡೌನ್ ಮಾಡಿ ಪ್ರಧಾನಿ ಆದೇಶಿಸಿರುವ ಹಿನ್ನೆಲೆ , ಧಾರ್ಮಿಕ ಕಾರ್ಯಕ್ರಮಗಳನ್ನೂ ರದ್ದು ಪಡಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಶಂಕರ್ ಆದೇಶ ಹೊರಡಿಸಿದ್ದಾರೆ.
ಕರಗ
ಏಪ್ರಿಲ್ 8ಕ್ಕೆ ನಿಗದಿ ಪಡಿಸಿ ಈಗಾಗಲೇ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಸಿದ್ಧತೆಗಳನ್ನು ನಡೆಸಲಾಗಿತ್ತು. ಆದರೆ ದೇಶವನ್ನು ಲಾಕ್ ಡೌನ್ ಮಾಡಿ ಪ್ರಧಾನಿ ಆದೇಶಿಸಿರುವ ಹಿನ್ನೆಲೆ, ಧಾರ್ಮಿಕ ಕಾರ್ಯಕ್ರಮಗಳನ್ನೂ ರದ್ದು ಪಡಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಶಂಕರ್ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಭಾರತ ಲಾಕ್ ಡೌನ್ ಆಗಿದೆ. ಜನರು ಮನೆಯಿಂದ ಹೊರ ಬರ ಬಾರದು ಎಂದು ಸೂಚನೆ ಇದೆ. ಈ ಹಿನ್ನೆಲೆ ಸರ್ಕಾರದ ಗೃಹ ಇಲಾಖೆಯ ಆದೇಶದಡಿ ಕರಗ ರದ್ದು ಮಾಡಲಾಗಿದೆ. ಯಾವುದೇ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಸಬಾರದು ಎಂದು ಸೂಚನೆ ನೀಡಲಾಗಿದೆ.