ದೊಡ್ಡಬಳ್ಳಾಪುರ: ಕಂದಾಯ ಸಚಿವ ಆರ್.ಅಶೋಕ ಅವರ ಆಪ್ತ ರಂಗಸ್ವಾಮಿ ಎಂಬುವವರು 2013ರಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ 10 ಕೋಟಿ ಮೌಲ್ಯದ ಜಮೀನು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಬಿಎಸ್ಪಿ (ಬಹುಜನ ಸಮಾಜವಾದಿ ಪಕ್ಷ) ಪಕ್ಷ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.
ಸಚಿವ ಆರ್.ಅಶೋಕ ಆಪ್ತರ ವಿರುದ್ಧ ಭೂ ಕಬಳಿಕೆ ಆರೋಪ ತಾಲೂಕಿನ ಎಸ್.ಎಂ.ಗೊಲ್ಲಹಳ್ಳಿಯ ಮುನಿಯಪ್ಪ ಮತ್ತು ಅವರ ಸಹೋದರರಿಗೆ ಬಿಬಿಎಂಪಿ ವ್ಯಾಪ್ತಿಯ ಸಿಂಗಾಪುರದಲ್ಲಿ ಸುಮಾರು 1.20 ಎಕರೆ ಭೂಮಿ ಹೊಂದಿದ್ದಾರೆ. ಸಹೋದರರನ್ನು 2013ರಲ್ಲಿ ಅಪಹರಿಸಿ ಬಲವಂತವಾಗಿ ಖರೀದಿ ಮಾಡಿದ್ದು. ಈ ಸಂಬಂಧ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ಕೂಡ ನಡೆಯುತ್ತಿದೆ. ಸಚಿವರ ಆಪ್ತ ಬಿ.ಎಂ.ರಂಗಸ್ವಾಮಿ 17-ಆಗಸ್ಟ್ 2020ರಂದು ಮಾಲೀಕರಾದ ಮುನಿಯಪ್ಪ ಅವರನ್ನು ತಮ್ಮ ಹಿಂಬಾಲಕರ ಮೂಲಕ ಅಪಹರಿಸಿ, ಬೆದರಿಕೆ ಹಾಕಿ ಒಪ್ಪಿಗೆ ಪತ್ರ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳನ್ನು ಈವರೆಗೆ ಪೊಲೀಸರು ಬಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಆರ್.ಅಶೋಕ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು, ಪೊಲೀಸರು ಸಹ ಸಚಿವರ ಆಪ್ತ ಬಿ.ಎಂ.ರಂಗಸ್ವಾಮಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಒಂದು ವಾರದಲ್ಲಿ ಆರೋಪಿಗಳ ಪತ್ತೆ ಹಚ್ಚದಿದ್ದರೇ ಸಿಎಂ ನಿವಾಸದ ಮುಂದೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ತಾಯಿಯ ತವರು ಮನೆಯಿಂದ 3 ಎಕರೆ ಭೂಮಿಯಲ್ಲಿ ಹೆಣ್ಣು ಮಕ್ಕಳಿಗೆ 1-20 ಎಕರೆ ಪಾಲು ಬಂದಿದೆ. ಇನ್ನೂ ನಮ್ಮ ಮಾವನವರ 1-20 ಎಕರೆ ಭೂಮಿಯನ್ನು ಇದೇ ರಂಗಸ್ವಾಮಿ ಅವರು ಖರೀದಿ ಮಾಡಿದ್ದಾರೆ. ಹೆಣ್ಣು ಮಕ್ಕಳಿಗೆ ಬಂದಿರುವ ಭೂಮಿಯನ್ನು ರಂಗಸ್ವಾಮಿ ಅವರು ಕಬಳಿಸಲು ಸಂಚು ಮಾಡಿದ್ದು, ನಮಗೆ ಪೊಲೀಸರ ಮೂಲಕ ಬೆದರಿಕೆ ಹಾಕಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ಸಂತ್ರಸ್ತರು ಆರೋಪಿಸಿದರು.
ಇವರ ಹಿಂಸೆಯಿಂದ ಮನನೊಂದು ಮಗಳು ಕಾವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವೇಳೆ ಅಪಹರಿಸಿ, ನೋಂದಣಿ ಕೂಡಾ ಮಾಡಿಕೊಂಡಿದ್ದಾರೆ. ಇಷ್ಟಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.