ಕರ್ನಾಟಕ

karnataka

ETV Bharat / state

ಬೊಮ್ಮಾಯಿ ಮಾಸ್​ ಲೀಡರ್​ ಅಲ್ಲ, ಅವರ ಮೇಲೆ ಯಾವುದೇ ನಿರೀಕ್ಷೆಯೂ ಇಲ್ಲ: ರವಿ ಕೃಷ್ಣಾರೆಡ್ಡಿ

ಬಸವರಾಜ ಬೊಮ್ಮಾಯಿ ಒಂದು ಕಡೆ ಹೈಕಮಾಂಡ್, ಮತ್ತೊಂದು ಕಡೆ ಯಡಿಯೂರಪ್ಪ, ಅವರ ಮನೆಯಲ್ಲಿರುವ ಸೂಪರ್ ಸಿಎಂ, ಇದರ ಜೊತೆ ಶಾಸಕರು ಮತ್ತು ಮಂತ್ರಿಗಳನ್ನ ತೃಪ್ತಿಪಡಿಸಿಕೊಂಡು ಹೋಗುವುದು ಅಸಾಧ್ಯ.

ರವಿಕೃಷ್ಣಾರೆಡ್ಡಿ ಬಸವರಾಜ ಬೊಮ್ಮಾಯಿ
ರವಿಕೃಷ್ಣಾರೆಡ್ಡಿ ಬಸವರಾಜ ಬೊಮ್ಮಾಯಿ

By

Published : Jul 30, 2021, 5:27 AM IST

ದೊಡ್ಡಬಳ್ಳಾಪುರ : ನೂತನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ವಿಚಿತ್ರ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಯಾಗಿದ್ದಾರೆ. ಅವರಿಗೆ ಇಡೀ ರಾಜ್ಯದ ಬೆಂಬಲವಿಲ್ಲ, ಅವರೊಬ್ಬ ಮಾಸ್ ಲೀಡರ್ ಸಹ ಅಲ್ಲವೆಂದು ಕೆಎಸ್ಆರ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದ್ದಾರೆ.

ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ವಿಚಿತ್ರ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಅವರೂ ಕಳೆದ ಎರಡು ವರ್ಷದಲ್ಲಿ ಹೋಮ್ ಮಿನಿಸ್ಟರ್ ಆಗಿ ಫೆಲ್ಯೂರ್ ಆಗಿದ್ದಾರೆ. ಅವರಿಗೆ ಇಡೀ ರಾಜ್ಯದ ಬೆಂಬಲವಿಲ್ಲ. ಮಾಸ್ ಲೀಡರ್ ಅಹಾ ಅಲ್ಲ, ಯಡಿಯೂರಪ್ಪನವರಿಗೆ ನಿಷ್ಟಾವಂತ ಮತ್ತು ಹೈಕಮಾಂಡ್​ ತೃಪ್ತಿ ಪಡಿಸುತ್ತಾರೆಂಬ ಕಾರಣಕ್ಕೆ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ ಎಂದು ಕೃಷ್ಣಾರೆಡ್ಡಿ ಹೇಳಿದ್ದಾರೆ.

ಗೃಹ ಮಂತ್ರಿಯಾಗಿ ವಿಫಲರಾಗಿರುವ ಅವರು ಇನ್ನೂ ಯಾವ ರೀತಿಯಲ್ಲಿ ಮುಖ್ಯಮಂತ್ರಿಯಾಗಿರುತ್ತಾರೋ ಗೊತ್ತಿಲ್ಲ, ಅವರ ಮಂತ್ರಿ ಮಂಡಲ ಸೇರುವ ಜನರು ಅವರವರ ಇಲಾಖೆಯಲ್ಲಿ ಮೇಯುವ ಜನರೇ, ಯಡಿಯೂರಪ್ಪ ಸರ್ಕಾರದಲ್ಲಿ ಇಲ್ಲದ ಪ್ರಮಾಣಿಕ ವ್ಯಕ್ತಿಗಳು ಬೊಮ್ಮಾಯಿಯವರ ಸಚಿವರ ಸಂಪುಟದಲ್ಲಿ ಮಂತ್ರಿಗಳಾಗುತ್ತಾರಾ..? ಯಡಿಯೂರಪ್ಪ ಸರ್ಕಾರದಲ್ಲಿದ್ದ ಭ್ರಷ್ಟ ಮಂತ್ರಿಗಳೇ ಇವರ ಸಚಿವ ಸಂಪುಟ ಸೇರೋದು. ಭ್ರಷ್ಟಾಚಾರ ನಿಲ್ಲೊದಿಲ್ಲ ಆದರಿಂದ ನಾವು ಬಸವರಾಜು ಬೊಮ್ಮಾಯಿ ಸರ್ಕಾರದಲ್ಲಿ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದಿದ್ದಾರೆ.

ಕೆಎಸ್ಆರ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ
ಒಂದು ಕಡೆ ಹೈಕಮಾಂಡ್ ತೃಪ್ತಿ ಪಡಿಸಬೇಕು, ಮತ್ತೊಂದು ಕಡೆ ಯಡಿಯೂರಪ್ಪ ಮತ್ತು ಅವರ ಮನೆಯಲ್ಲಿರುವ ಸೂಪರ್ ಸಿಎಂ, ಇದರ ಜೊತೆ ಶಾಸಕರು ಮತ್ತು ಮಂತ್ರಿಗಳನ್ನ ತೃಪ್ತಿಪಡಿಸಿಕೊಂಡು ಹೋಗುವುದು ಬೊಮ್ಮಾಯಿಗೆ ಅಸಾಧ್ಯ. 2018ರ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಎಸಿಬಿ ರದ್ದು ಮಾಡಿ ಲೋಕಾಯುಕ್ತ ಜಾರಿ ಮಾಡುವುದ್ದಾಗಿ ಹೇಳಿತ್ತು. ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಆಯ್ತು ಇಬ್ಬರು ಮುಖ್ಯಮಂತ್ರಿ ಬದಲಾದರು. ಲೋಕಯುಕ್ತ ಜಾರಿ ಮಾಡ್ತೀವಿ ಅಂದಿದ್ದು, ಇಷ್ಟು ವರ್ಷವಾದ್ರು ಮಾಡಿಲ್ಲ. ಅವರು ವೃದ್ದಾಪ್ಯ ಮತ್ತು ವಿಧವಾ ವೇತನವನ್ನ 200 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಆದರೆ ಕನಿಷ್ಠ 2000 ಸಾವಿರ ವೇತನ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.ಇದೇ ವೇಳೆ ಆಗಸ್ಟ್ 8 ರಿಂದ ಕೆಆರ್​ಎಸ್ ಪಕ್ಷ ವತಿಯಿಂದ ಭ್ರಷ್ಟರೇ ಪವಿತ್ರವಾದ ರಾಜಕಾರಣವನ್ನು ಬಿಟ್ಟು ತೊಲಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಭಿಯಾನವನ್ನು ಶಿವಮೊಗ್ಗ ಈಸೂರಿನಲ್ಲಿ ಎಸ್.ಆರ್ ಹಿರೇಮಠ್ ಚಾಲನೆ ನೀಡಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನ ನಡೆಯಲಿದೆ. ತುಮಕೂರಿನಲ್ಲಿ ಸಮಾರೋಪ ಸಮಾರಂಭದ ನಡೆಯಲಿದೆ ಎಂದು ತಿಳಿಸಿದರು.ಇದನ್ನು ಓದಿ:ಬಿಎಸ್​ವೈಗೆ ಸಿಎಂ ಸ್ಥಾನ ಹೋಗುತ್ತೆ ಅಂತಾ ಗೊತ್ತಿದ್ರೂ ನೆರೆ ಪರಿಹಾರದ ಸುಳ್ಳು ಭರವಸೆ ನೀಡಿದ್ದಾರೆ : ಸಿದ್ದರಾಮಯ್ಯ

ABOUT THE AUTHOR

...view details