ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಿಂದ ಬಿಜೆಪಿಗೆ ಓಡಿ ಹೋಗಿದ್ದು ಪ್ರಾಮಾಣಿಕತೆನಾ? ಎಂಟಿಬಿ ವಿರುದ್ಧ ಬೈರತಿ ಸುರೇಶ್ ವಾಗ್ದಾಳಿ..

ಹೊಸಕೋಟೆಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಬ್ಬಾಳ ಶಾಸಕ ಬೈರತಿ ಸುರೇಶ್, ಮಾಜಿ ಸಚಿವ ಎಂಟಿಬಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಎಂಟಿಬಿ ವಿರುದ್ಧ ಬೈರತಿ ಸುರೇಶ್ ವಾಗ್ದಾಳಿ

By

Published : Nov 20, 2019, 12:00 AM IST

ಹೊಸಕೋಟೆ:ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮಾತಿನ ವಾಕ್ ಸಮರ ಏರ್ಪಟ್ಟಿದೆ. ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಪತಿ ಶಾಸಕ ಬೈರತಿ ಸುರೇಶ್, ಮಾಜಿ ಸಚಿವ ಎಂಟಿಬಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಹೆಬ್ಬಾಳ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ..

ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರೋ ಕ್ಷೇತ್ರ ಹೊಸಕೋಟೆ. ಅದರಲ್ಲೂ ಕಾಂಗ್ರೆಸ್‌ಗೆ ನಿಷ್ಠೆಯಿಂದ ಇದ್ದಂತಹ ಎಂಟಿಬಿ ನಾಗರಾಜ್ ಕಾಂಗ್ರೆಸ್‌ಗೆ ಟಕ್ಕರ್ ನೀಡಿ ಬಿಜೆಪಿಗೆ ಬಂದಿದ್ದು ಇತಿಹಾಸ. ಇನ್ನೂ ಎಂಟಿಬಿ ನಾಗರಾಜ್ ರಾಜೀನಾಮೆಯನ್ನ ಪ್ರಾಮಾಣಿಕತೆಗೆ ಹೋಲಿಸಿರೋ ಸಿಎಂ ಯಡಿಯೂರಪ್ಪ ಹೊಸಕೋಟೆಗೆ ಬಂದು ಗುಣಗಾನ ಮಾಡಿ ಹೋಗಿದ್ದು ಆಯ್ತು. ಅದರಲ್ಲೂ ಎಂಟಿಬಿ ಪರ ಪ್ರಚಾರ ಮಾಡಿದ ಸಿಎಂ ಎದುರಾಳಿಗಳನ್ನ ಟೀಕಿಸಿ ಹೋದ್ರು. ಈ ಬಗ್ಗೆ ವಾಕ್ ಸಮರಕ್ಕೆ ಇಳಿದಿರೋ ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಪತಿ ಶಾಸಕ ಬೈರತಿ ಸುರೇಶ್ ಎಂಟಿಬಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಹೊಸಕೋಟೆಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಬ್ಬಾಳ ಶಾಸಕ ಬೈರತಿ ಸುರೇಶ್, ಕಾಂಗ್ರೆಸ್‌ನಿಂದ ಬಿಜೆಪಿಗೆ ರಾತ್ರೋರಾತ್ರಿ ಎಂಟಿಬಿ ಓಡಿ ಹೋಗಿದ್ದು ಮೋಸನಾ, ಪ್ರಾಮಾಣಿಕತೆನಾ ಅಂತಾ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಎಂಟಿಬಿ ನಾಗರಾಜ್ ಬಗ್ಗೆ ಬಿಜೆಪಿ ನಾಯಕರೆ ಈ ಹಿಂದೆ ಏನು ಮಾತನಾಡಿದ್ದಾರೆ ಅಂತಾ ಪರಾಮರ್ಶಿಸಲಿ. ಎಂಟಿಬಿ ನಾಗರಾಜ್​ಗೆ ಮುಂದಿನ ದಿನಗಳಲ್ಲಿ ಹೊಸಕೋಟೆಯ ಜನರೇ ಬುದ್ದಿ ಕಲಿಸುತ್ತಾರೆ. ಸಿದ್ದರಾಮಯ್ಯ ಬಗ್ಗೆ ಎಂಟಿಬಿ ಮಾತನಾಡ್ತಾರೆ. ಆದರೆ, ಸಿದ್ದರಾಮಯ್ಯ ದೂಳಿಗೂ ಎಂಟಿಬಿ ನಾಗರಾಜ್ ಸಮವಿಲ್ಲ. ಇನ್ನೂ ಎಂಟಿಬಿ ಬಳಿ ಸಾವಿರಾರು ಕೋಟಿ ಆಸ್ತಿ ಇರಬಹುದು. ಆದರೆ, ಸಿದ್ದರಾಮಯ್ಯ ಬಳಿ ಕೋಟ್ಯಂತರ ಜನರ ಬೆಂಬಲವಿದೆ ಎಂದರು.

ABOUT THE AUTHOR

...view details