ಬೆಂಗಳೂರು: ಹಬ್ಬಕ್ಕೆಂದು ಬೆಳಿಗ್ಗೆ ಮಾವಿನ ಎಲೆ ತರಲು ತೋಟಕ್ಕೆ ಹೋಗಿದ್ದ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ನಡೆಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕಟ್ಪಿಗೆ ಹಿಂದ್ಲಹಳ್ಳಿಯಲ್ಲಿ ನಡೆದಿದೆ.
ಯುಗಾದಿ ಹಬ್ಬಕ್ಕೆ ಮಾವಿನ ಎಲೆ ತರಲು ಹೋದವರ ಮೇಲೆ ಕರಡಿ ದಾಳಿ - ಕರಡಿ ದಾಳಿ
ದೊಡ್ಡಬಳ್ಳಾಪುರ ತಾಲೂಕಿನ ಕಟ್ಪಿಗೆ ಹಿಂದ್ಲಹಳ್ಳಿಯಲ್ಲಿ ಹಬ್ಬಕ್ಕೆಂದು ಬೆಳಿಗ್ಗೆ ಮಾವಿನ ಎಲೆ ತರಲು ತೋಟಕ್ಕೆ ಹೋಗಿದ್ದ ವೇಳೆ ಕರಡಿಯೊಂದು ದಾಳಿ ನಡೆಸಿರುವ ಘಟನೆ ನಡೆದಿದೆ.
ಕರಡಿ ದಾಳಿ
ಇಂದು ಮುಂಜಾನೆ ಶಿವಶಂಕರ್ ತೋಟಕ್ಕೆ ಮಾವಿನ ಎಲೆ ತರಲು ಹೋಗಿದ್ದರು. ಈ ವೇಳೆ ಹಿಂದಿನಿಂದ ಕರಡಿ ದಾಳಿ ಮಾಡಿದೆ. ಕರಡಿ ದಾಳಿಯಿಂದ ಶಿವಶಂಕರ್ ಬೆನ್ನಿನ ಮೇಲೆ ಗಾಯವಾಗಿದೆ. ಅಲ್ಲದೆ ಈ ವೇಳೆ ಕರಡಿ ಓಡಿಸಲು ಬಂದವರ ಮೇಲೆಯೂ ದಾಳಿ ನಡೆಸಿದ್ದು, ಇದರಿಂದ ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಆಗಮಿಸಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಕರಡಿ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಘಟನೆಯಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.