ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಹೊಸಕೋಟೆ ಉಪಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ರೌಡಿಗಳ ಪರೇಡ್ ನಡೆಸಿತು. ತಾಲೂಕಿನ ಎಲ್ಲೆಡೆಯಿಂದ ನೂರಕ್ಕೂ ಹೆಚ್ಚು ರೌಡಿಗಳು ಪೇರೆಡ್ನಲ್ಲಿ ಭಾಗಿಯಾಗಿದ್ದು ಬೆಂಗಳೂರು ಗ್ರಾಮಾಂತರ ಎಸ್.ಪಿ ರವಿ ಡಿ ಚನ್ನಣ್ಣನವರ್ ರೌಡಿಗಳಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.
ಉಪಚುನಾವಣೆ ಘೋಷಣೆಯಾಗಿದ್ದ ಹಿನ್ನಲೆ: ರೌಡಿ ಪೇರೆಡ್ ನಡೆಸಿದ ಎಸ್ಪಿ ರವಿ ಡಿ. ಚನ್ನಣ್ಣನವರ್ - ಕಟ್ಟಿಗೇನಹಳ್ಳಿ, ಬಯಲುನರಾಸಪುರ ರೌಡಿಗಳಿಗೆ ಪರೇಡ್
ಗಾಂಜಾ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ರೌಡಿಗಳಿಗೆ ರವಿ ಡಿ ಚನ್ನಣ್ಣನವರ್ ಎಚ್ಚರಿಕೆ ನೀಡಿದರು. ಇನ್ನು ಮುಂದೆ ಗುಂಡಾ ವರ್ತನೆ ಕಂಡು ಬಂದಲ್ಲಿ ಗುಂಡಾ ಖಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಸೂಚನೆ ನೀಡಿದ್ದಾರೆ.
ರೌಡಿ ಪೇರೆಡ್ ನಡೆಸಿದ ಎಸ್ಪಿ ರವಿ ಡಿ. ಚನ್ನಣ್ಣನವರ್
ಗಾಂಜಾ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ರೌಡಿಗಳಿಗೆ ರವಿ ಡಿ ಚನ್ನಣ್ಣನವರ್ ಎಚ್ಚರಿಕೆ ನೀಡಿದರು. ಇನ್ನು ಮುಂದೆ ಗುಂಡಾ ವರ್ತನೆ ಕಂಡು ಬಂದಲ್ಲಿ ಗುಂಡಾ ಖಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಸೂಚನೆ ನೀಡಿದ್ದಾರೆ.
ಹೊಸಕೋಟೆ ಕಟ್ಟಿಗೇನಹಳ್ಳಿ ಹಾಗೂ ಬಯಲುನರಾಸಪುರ ಭಾಗದಲ್ಲಿ ಸಾಕಷ್ಟು ಅಕ್ರಮ ಚಟುವಟಿಕೆಗಳು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಮುಂದೆ ಇವೆಲ್ಲಾ ಬಂದ್ ಆಗಬೇಕು. ನೀವು ಬದಲಾವಣೆಯಾದ್ರೆ ರೌಡಿ ಶೀಟರ್ ಕ್ಲೋಸ್ ಮಾಡ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಭರವಸೆ ನೀಡಿದರು.