ಕರ್ನಾಟಕ

karnataka

ETV Bharat / state

ಕೆತ್ತನೆ ಮಾಡಿದ್ದ ಆನೆ ದಂತ ಮಾರಾಟ ಮಾಡಲು ಯತ್ನ: 6 ಜನರ ಬಂಧನ - nelamangala news

ಆನೆ ದಂತಗಳನ್ನು ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸಿದ  ಕುಖ್ಯಾತ  ದಂತಚೋರರನ್ನು ಬಂಧಿಸುವಲ್ಲಿ  ಬೆಂಗಳೂರು  ಅರಣ್ಯ ಸಂಚಾರಿ ದಳದ  ಅಧಿಕಾರಿಗಳು  ಯಶಸ್ವಿಯಾಗಿದ್ದಾರೆ.

Attempt to sell carved elephant ivory
ಕೆತ್ತನೆ ಮಾಡಿದ್ದ ಆನೆ ದಂತ ಮಾರಾಟ

By

Published : Jan 14, 2021, 2:52 AM IST

ನೆಲಮಂಗಲ: ಕೆತ್ತನೆ ಮಾಡಿದ್ದ ಆನೆ ದಂತ ಮಾರಾಟಕ್ಕೆ ಯತ್ನಿಸಿದ ಕುಖ್ಯಾತ ದಂತ ಚೋರರನ್ನು ಅರಣ್ಯ ಸಂಚಾರಿ ದಳ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

ಆನೆ ದಂತಗಳನ್ನು ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸಿದ ಕುಖ್ಯಾತ ದಂತಚೋರರನ್ನು ಬಂಧಿಸುವಲ್ಲಿ ಬೆಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಬಂಧಿತರು

ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲೂಕಿನ ಮರಿಯಪ್ಪನ ಪಾಳ್ಯದ ಮನೆಯಲ್ಲಿ ಆನೆ ದಂತಗಳನ್ನು ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸಿದ್ದಾರೆ ಎಂಬ ಸುಳುವಿನ ಮೇರೆಗೆ ಬೆಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯ ಸಮಯದಲ್ಲಿ 3.3 ಕೆ.ಜಿ ತೂಕವುಳ್ಳ ಕೆತ್ತನೆ ಒಳಗೊಂಡ ಆನೆಯ ದಂತ ಪತ್ತೆಯಾಗಿದೆ.

ಬಂಧಿತರು

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಡಿ ಸದಾಶಿವ (39), ನಾಗರಾಜ್ (40), ಮೊಹಮ್ಮದ್ ಆಸ್ಗರ್ ( 46) ಪ್ರಮೀಳಾ ಕುಮಾರಿ ( 42) , ಪ್ರಭು (46) , ಪುರುಷೋತ್ತಮ್ ( 55) ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಲಾಗಿದೆ.

ABOUT THE AUTHOR

...view details