ದೊಡ್ಡಬಳ್ಳಾಪುರ:ಕೊಂಗಾಡಿಯಪ್ಪ ಪ್ರತಿಮೆ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಪವನ್ ಅಲಿಯಾಸ್ ಬೆಂಕಿ ಬಂಧಿತ ಆರೋಪಿ.
ಕೊಂಗಾಡಿಯಪ್ಪ ಪ್ರತಿಮೆ ವಿರೂಪ: ಆರೋಪಿಯ ಬಂಧನ - Doddaballapur latest news
ಕೊಂಗಾಡಿಯಪ್ಪ ಪ್ರತಿಮೆ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
arrested-for-distorting-the-kongadiyappa-statue
ನಗರದ ಮಾರುಕಟ್ಟೆ ಶಾಲೆ ಸಮೀಪ ಪ್ರತಿಷ್ಠಾಪಿಸಲಾಗಿದ್ದ ಕೊಂಗಾಡಿಯಪ್ಪ ಪ್ರತಿಮೆಯನ್ನು ಕಿಡಿಗೇಡಿ ಪವನ್ ಸೆ. 29ರಂದು ರಾತ್ರಿ ವಿರೂಪಗೊಳಿಸಿದ್ದ ಎನ್ನಲಾಗಿದೆ. ಈತ ಮಾರ್ಕೆಟ್ ಸ್ಕೂಲ್ ಹಿಂಭಾಗ ನಿವಾಸಿ. ಅರೆ ಮಾನಸಿಕ ಅಸ್ವಸ್ಥ ಎನ್ನಲಾಗಿದೆ.
ಘಟನೆ ನಂತರ ದೇಂವಾಂಗ ಮಂಡಳಿಯ ಮುಖಂಡರು ಇದನ್ನು ಖಂಡಿಸಿ ಭಾನುವಾರ ಪ್ರತಿಮೆ ಬಳಿಯೇ ಪ್ರತಿಭಟನೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.