ಕರ್ನಾಟಕ

karnataka

By

Published : Jul 7, 2019, 2:40 PM IST

ETV Bharat / state

ಶತಮಾನಗಳಿಂದಲೂ ಒಂದೆಡೆ ವಾಸವಾಗಿದ್ದ ಬಾವಲಿಗಳ ಮೇಲೆ ಬೇಟೆಗಾರರ ಕಣ್ಣು

ಹಲವಾರು ವರ್ಷಗಳಿಂದ ಒಂದೇ ಕಡೆ ಗುಂಪಾಗಿ ವಾಸಿಸುತ್ತಿರುವ ಬಾವಲಿಗಳನ್ನು ಹಿಡಿಯಲು ಬೇಟೆಗಾರರು ಹೊಂಚು ಹಾಕಿದ್ದು, ಗ್ರಾಮಸ್ಥರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾವಲಿಗಳ ಮೇಲೆ ಬೇಟೆಗಾರರ ಕಣ್ಣು

ಆನೇಕಲ್: ಶತಮಾನಗಳಿಂದ ಒಂದೇ ಪ್ರದೇಶದಲ್ಲಿ ವಾಸಿಸುತ್ತ ರೈತಮಿತ್ರನೆಂದೇ ಖ್ಯಾತಿಯಾದ ಬಾವಲಿಗಳ ಮೇಲೆ ಬೇಟೆಗಾರರ ಕಣ್ಣು ಬಿದ್ದಿದೆ.

ಈ ಹಿಂದೆ ನಿಫೋ ವೈರಸ್ ಭೀತಿಗೆ ಬಾವಲಿಯೇ ಕಾರಣವೆಂಬ ಅವೈಜ್ಞಾನಿಕ ಕಲ್ಪನೆಗೆ ತುತ್ತಾಗಿದ್ದ ಬಾವಲಿಗಳ ಸ್ಥಿತಿ ಇದೀಗ ಬೇಟೆಗಾರರ ಉಪಟಳಕ್ಕೆ ತುತ್ತಾಗಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.

ಆನೇಕಲ್ ತಾಲೂಕಿನ ಸಮಂದೂರು ಗ್ರಾಮದ ತಿಮ್ಮಸಂದ್ರದ ಕೆರೆಯಂಚಿನಲ್ಲಿ ಇರುವ ಸಿಲ್ವರ್ ಮರಗಳ ರೆಂಬೆ-ಕೊಂಬೆಗಳಲ್ಲಿ ಸಾವಿರಾರು ಬಾವಲಿಗಳು ವಾಸಿಸುತ್ತಿವೆ. ಈ ರೀತಿ ಒಂದೇ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಾವಲಿಗಳು ವಾಸಿಸುವುದು ಬಹಳ ವಿರಳ. ಗ್ರಾಮದ ಜನರು ಬಾಲ್ಯದಿಂದಲೂ ಈ ಬಾವಲಿಗಳನ್ನು ನೋಡಿಕೊಂಡೇ ಬೆಳೆದವರು, ಆದ್ದರಿಂದ ಊರಿನ ಜನರಿಗೆ ಈ ಬಾವಲಿಗಳೆಂದರೆ ಪ್ರೀತಿ..

ಬಾವಲಿಗಳ ಮೇಲೆ ಬೇಟೆಗಾರರ ಕಣ್ಣು

ಆದರೆ ಇಷ್ಟರವರೆಗೆ ನೆಮ್ಮದಿಯಿಂದ ತಮ್ಮ ಪಾಡಿಗೆ ಇದ್ದ ಬಾವಲಿಗಳ ಮೇಲೆ ಇದೀಗ ಬೇಟೆಗಾರರ ಕಣ್ಣು ಬಿದ್ದಿದೆ. ಕರ್ನಾಟಕ- ತಮಿಳುನಾಡು ಗಡಿ ಭಾಗದಲ್ಲಿರುವ ತಿಮ್ಮಸಂದ್ರಕ್ಕೆ ತಮಿಳುನಾಡಿಂದ ಬಂದಿರುವ ಬೇಟೆಗಾರರು ಗ್ರಾಮಸ್ಥರ ಕಣ್ತಪ್ಪಿಸಿ ಬಾವಲಿಗಳ ಬೇಟೆಗೆ ಹೊಂಚು ಹಾಕುತ್ತಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಗ್ರಾಮಸ್ಥರು ಬಾವಲಿಗಳ ರಕ್ಷಣೆಗೆ ಮುಂದಾಗಿದ್ದು, ಬೇಟೆಗಾರರನ್ನು ಹಿಡಿಯಲು ಕಾದು ಕುಳಿತಿದ್ದಾರೆ.


ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪರಿಸರ ಪ್ರಿಯರು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಬೇಟೆಗಾರರನ್ನು ಹಿಡಿಯುವ ಮೂಲಕ ಅಳಿವಿನಂಚಿನಲ್ಲಿರುವ ಬಾವಲಿಗಳ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

ABOUT THE AUTHOR

...view details