ಕರ್ನಾಟಕ

karnataka

ETV Bharat / state

ಸರ್ಕಾರದ ಅಧಿಕಾರಿಗಳ ವರ್ಗಾವಣೆ ಅಸ್ತ್ರದಿಂದ ಸಾರ್ವಜನಿಕರಿಗೆ ಕಿರಿಕಿರಿ!

ರಾಜ್ಯದಲ್ಲಿ ಸರ್ಕಾರಗಳು ಬದಲಾಗುತ್ತಿದ್ದಂತೆ ವರ್ಗಾವಣೆ ರೀತಿಯ ಅಸ್ತ್ರಗಳನ್ನು ‌ಸರ್ಕಾರಗಳು ಬಳಸುತ್ತಿವೆ. ಇದರ ಬಿಸಿ ಅಧಿಕಾರಿಗಳ ಜೊತೆಯಲ್ಲಿ ರೈತರು ಹಾಗೂ ಸಾರ್ವಜನಿಕರಿಗೆ ತಟ್ಟುತ್ತಿದೆ. ಇದೀಗ ಈ ಸಮಸ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೂ ತಟ್ಟಿದೆ.

ಎಸಿ ಸ್ಥಾನಕ್ಕೆ ಪೈಪೋಟಿ: ರೈತರು, ಸಾರ್ವಜನಿಕರು ಹೈರಾಣು

By

Published : Oct 18, 2019, 8:21 PM IST

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಗಳು ಬದಲಾದಂತೆ ಐಎಎಸ್, ಕೆಎಎಸ್, ಐಪಿಎಸ್ ಇನ್ನೂ ಇತರೆ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ವರ್ಗಾವಣೆಯೊಂದಿಗೆ ಬದಲಾವಣೆ ಆಗುವುದು ಸರ್ವೆ ಸಾಮಾನ್ಯ. ಆದರೆ ಕೆಲವೊಂದು ಬಾರಿ ವರ್ಗಾವಣೆಯಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಕೆಲವೊಮ್ಮೆ ಸಮಸ್ಯೆ ಬಂದಾಗ ಮಾತ್ರ ಜನರ ತೊಂದರೆಗೊಳಗಾಗುತ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ವಿಭಾಗಾಧಿಕಾರಿಗಳ ವರ್ಗಾವಣೆಯಿಂದಾಗಿ ರೈತರು ಹಾಗೂ ಸಾರ್ವಜನಿಕರ‌ ಕೇಸ್ ಫೈಲ್​ಗಳು ಇತ್ಯರ್ಥವಾಗದೇ, ಪ್ರತಿ ದಿನ ಎಸಿ ಕಚೇರಿಗೆ ಭೇಟಿ ನೀಡಿ, ಬರಿಗೈಯಲ್ಲಿ ವಾಪಸಾಗುವಂತಾಗಿದೆ.

ಎಸಿ ಸ್ಥಾನಕ್ಕೆ ಪೈಪೋಟಿ: ರೈತರು, ಸಾರ್ವಜನಿಕರು ಹೈರಾಣು

ಕಳೆದ ಮೈತ್ರಿ ಸರ್ಕಾರದಲ್ಲಿಕೆಎಎಸ್ ಅಧಿಕಾರಿ ಸಿ.ಮಂಜುನಾಥ್ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಮಂಜುನಾಥ್ ಸ್ಥಾನಕ್ಕೆ ಕೆಎಎಸ್​​ ಅಧಿಕಾರಿ ಬಿ.ಆರ್ ಹರೀಶ್ ನಾಯ್ಕ್ ವರ್ಗಾವಣೆಗೊಂಡಿದ್ದಾರೆ. ಈ ವೇಳೆ ಮಂಜುನಾಥ್ ವರ್ಗಾವಣೆ ಆದ 7 ತಿಂಗಳಲ್ಲೇ ಮತ್ತೊಂದು ಕಡೆ ವರ್ಗಾವಣೆಯನ್ನು ಪ್ರಶ್ನಿಸಿ ಕೆಇಟಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಜತೆಗೆ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಯಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು. ಹೀಗೆ ಈ ಇಬ್ಬರು ಕೆಎಎಸ್ ಅಧಿಕಾರಿಗಳ ನಡುವೆ ತಿಕ್ಕಾಟ ಶುರುವಾಗಿದ್ದು ಇದರಿಂದ ರೈತರು ಮತ್ತು ಸಾರ್ವಜನಿಕರು ಹೈರಾಣಗುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ಒಟ್ಟು ನಾಲ್ಕು ತಾಲೂಕುಗಳ ಸರ್ಕಾರಿ ಕೆಲಸ ಕಾರ್ಯಗಳು ಇದೇ ಕಛೇರಿಯಲ್ಲಿ ನಡೆಯಬೇಕು‌. ಆದರೆ ಈ ಇಬ್ಬರ ಅಧಿಕಾರಿಗಳ ತಿಕ್ಕಾಟದಿಂದ ನೂರಾರು ಕಿ.ಮೀ ದೂರದಿಂದ ಬರುವ ರೈತರು ಖಾಲಿ ಚೇರ್ ನೋಡಿ ವಾಪಾಸ್ ಆಗುತ್ತಿದ್ದಾರೆ. ಯಾರೇ ಆಗಲಿ ಅವಧಿ ಮುಗಿಯುವವರೆಗೂ ಒಬ್ಬರೇ ಅಧಿಕಾರಿ ಇದ್ದರೆ ಜನರ ಸಮಸ್ಯೆಗಳು ಬಗೆಹರಿಯುತ್ತವೆ. ಇಂತಹ ವ್ಯವಸ್ಥೆ ವಿರುದ್ಧ ರೈತರು ಹಾಗೂ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ABOUT THE AUTHOR

...view details