ದೊಡ್ಡಬಳ್ಳಾಪುರ:ಕೆಲಸಕ್ಕೆಂದು ಸ್ನೇಹಿತರ ಬೈಕ್ನಲ್ಲಿ ಹೋಗುತ್ತಿದ್ದಾಗ ಸ್ಪೀಡ್ ಬ್ರೇಕರ್ (ಹಂಪ್) ಬಳಿ ಕೆಳಗೆ ಬಿದ್ದ ಮಹಿಳೆಯ ಮೇಲೆ ಲಾರಿ ಹರಿದಿದೆ. ಪರಿಣಾಮ, ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಮಾಕಳಿ ರೈಲ್ವೆ ನಿಲ್ದಾಣ ಸಮೀಪದ ಬೆಂಗಳೂರು - ಹಿಂದೂಪುರ ರಸ್ತೆಯ ತಿರುವಿನಲ್ಲಿ ನಡೆದಿದೆ.
ಸ್ಪೀಡ್ ಬ್ರೇಕರ್ ಬಳಿ ಎಗರಿದ ಬೈಕ್: ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಲಾರಿ - ದೊಡ್ಡಬಳ್ಳಾಪುರ ಸ್ಪೀಡ್ ಬ್ರೇಕರ್
ರಸ್ತೆಯ ಉಬ್ಬಿನಲ್ಲಿ ಬೈಕ್ ಚಲಿಸುವಾಗ ಎಗರಿದ್ದು, ಹಿಂಬದಿ ಕುಳಿತಿದ್ದ ಮಹಿಳೆ ರಸ್ತೆಗೆ ಬಿದ್ದಿದ್ದಾರೆ. ಅದೇ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಲಾರಿ ಆಕೆಯ ಮೇಲೆ ಹರಿದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ನಾಗಮಣಿ
ಹಿಂದೂಪುರ ನಿವಾಸಿ ನಾಗಮಣಿ (28) ಮೃತರು. ಸ್ವಗ್ರಾಮದಿಂದ ಸಹೋದರನ ಮಿತ್ರನೊಂದಿಗೆ ದೊಡ್ಡಬಳ್ಳಾಪುರ ಸಮೀಪದ ಕಾರ್ಖಾನೆಗೆ ಕೆಲಸಕ್ಕೆ ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ರಸ್ತೆಯ ಉಬ್ಬಿನಲ್ಲಿ ಬೈಕ್ ಚಲಿಸುವಾಗ ಎಗರಿದ್ದು, ಹಿಂಬದಿ ಕುಳಿತಿದ್ದ ನಾಗಮಣಿ ರಸ್ತೆಗೆ ಬಿದ್ದಿದ್ದಾರೆ. ಅದೇ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಲಾರಿ ಅವರ ಮೇಲೆ ಹರಿದಿದೆ. ಇನ್ನು ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.