ಕರ್ನಾಟಕ

karnataka

ETV Bharat / state

ದೇವನಹಳ್ಳಿಯಲ್ಲಿ ಮತ್ತೆ ಟೋಲ್ ದರ ಹೆಚ್ಚಳ... ವಾಹನ ಸವಾರರಿಗೆ ದರ ಏರಿಕೆ ಬಿಸಿ, ಆಕ್ರೋಶ - ಬೆಂಗಳೂರು

ಇದು ವರೆಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಟೋಲ್ ಗೇಟ್ ದರ 85 ರೂಪಾಯಿ ಇತ್ತು. ಆದರೆ ಇದೀಗ ಮತ್ತೆ 5 ರೂ. ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ದರ ಹೆಚ್ಚಳದ ಬಿಸಿ ತಟ್ಟಿದೆ.

ರಾಷ್ಟ್ರೀಯ ಹೆದ್ದಾರಿ 7 ರ ಟೋಲ್ ಗೇಟ್

By

Published : Apr 1, 2019, 5:53 PM IST

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 7 ರ ಟೋಲ್ ಗೇಟ್​ನಲ್ಲಿ ದರ ಹೆಚ್ಚಳ ಮಾಡಿದ್ದು, ವಾಹನ ಸವಾರರಿಗೆ ದರ ಹೆಚ್ಚಳದ ಬಿಸಿ ತಟ್ಟಿದೆ.

kempegowda airport toll gate

ಬೆಂಗಳೂರಿನಿಂದ ಹೈದರಾಬಾದ್​ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 7ರ ದೇವನಹಳ್ಳಿ ಬಳಿ ಇರುವ ಎಸ್​ಎಲ್ ಟೋಲ್​ ಪ್ಲಾಜಾದಲ್ಲಿ ನಿನ್ನೆ ಮಧ್ಯೆ ರಾತ್ರಿಯಿಂದಲೇ ಪರಿಷ್ಕೃತ ಟೋಲ್ ದರ ಜಾರಿಯಾಗಿದ್ದು, ವಾಹನ ಸವಾರರಿಗೆ 5 ರೂ. ಶುಲ್ಕ ಹೆಚ್ಚಳದ ಬಿಸಿ ತಟ್ಟಿದೆ.

ಈಗಾಗಲೇ ವಾಹನ ಸವಾರರು 5 ರೂ. ಹೆಚ್ಚು ಹಣವನ್ನು ಪಾವತಿಸಿ ಪ್ರಯಾಣ ಮಾಡುತ್ತಿದ್ದಾರೆ. 2018ರ ಏ.1ರಿಂದ 2019 ಮಾ.31ರವರೆಗೆ ಪರಿಷ್ಕೃತ ಶುಲ್ಕ ಪಡೆಯಲು ಇದೇ ದೇವನಹಳ್ಳಿ ಟೊಲ್ ವೇ ಪ್ರೈವೇಟ್ ಲಿಮಿಟೆಡ್​ಗೆ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ಸೂಚಿಸಿದ್ದು, ಒಂದು ವರ್ಷದ ಕಾಲ ಪರಿಷ್ಕೃತ ದರ ಜಾರಿಯಲ್ಲಿತ್ತು.‌ ಇದೀಗ‌ ಮತ್ತೆ 2019 ಏಪ್ರಿಲ್ 1 ರಿಂದ 2020 ಮೇ 31 ರವರೆಗೂ ಹೊಸ ದರ ಇರಲಿದೆ.

ಐದು ರೂ. ಹೆಚ್ಚಾಗಿದ್ದು, ಹೆಚ್ಚುವರಿ ಶುಲ್ಕ ನೀಡಿ ವಾಹನ ಸವಾರರು ಪ್ರಯಾಣ ಮಾಡಬೇಕು. ಸದ್ಯ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಕಡೆಗಳಿಂದ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು ವಿಮಾನ ನಿಲ್ದಾಣದಿಂದ ಹಿಂತಿರುಗುವಾಗ 130 ರೂ. ಶುಲ್ಕ ಪಾವತಿಸಲಾಗುತ್ತಿತ್ತು. ಇಂದಿನಿಂದ 5ರೂ. ಹೆಚ್ಚಳವಾಗಿದ್ದು ಕಾರು, ಜೀಪು ಹಾಗೂ ವ್ಯಾನ್‌ಗಳು 135 ರೂ.ಗಳನ್ನು ಪಾವತಿಸಬೇಕಾಗಿದೆ. ಅಲ್ಲದೇ ಏಕಕಾಲದಲ್ಲಿ ಪ್ರಯಾಣ ಶುಲ್ಕದಲ್ಲೂ 5 ರೂ. ಹೆಚ್ಚಳ ಮಾಡಲಾಗಿದೆ. ಈ ಮೊದಲು ವಿಮಾನ ನಿಲ್ದಾಣಕ್ಕೆ ಹೋಗಲು 85 ರೂಪಾಯಿ ಇತ್ತು. ಇದೀಗ 90 ರೂ. ನೀಡಬೇಕಿದೆ.

ಪ್ರತಿ ವರ್ಷ ಟೋಲ್ ಸಿಬ್ಬಂದಿ ಟೋಲ್ ದರವನ್ನು ಹೆಚ್ಚಿಸುತ್ತಲೇ ಇದ್ದಾರೆ. ಈ ಟೋಲ್​ನಲ್ಲಿ ವಸೂಲಿ ಮಾಡುವಷ್ಟು ದುಬಾರಿ ಟೋಲ್ ರಾಜ್ಯದಲ್ಲಿ ಬೇರೆ ಎಲ್ಲೂ ವಸೂಲಿ ಮಾಡುತ್ತಿಲ್ಲ. ಇಲ್ಲಿನ ಅಧಿಕಾರಿಗಳು ಹೆಚ್ಚು ಹಣ ವಸೂಲಿ ಮಾಡಲು‌ ಮುಂದಾಗಿದ್ದಾರೆ.‌ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಇದರ ಕುರಿತು ಗಮನ‌ ಹರಿಸಿ ಟೋಲ್ ದರ ಕಡಿಮೆ ಮಾಡಿಸಬೇಕು ಎಂದು ವಾಹನ ಸವಾರರು ಮನವಿ ಮಾಡಿಕೊಂಡಿದ್ದಾರೆ.

ಒಂದು ಕಡೆ ಟೋಲ್‌ ದರ ಏರಿಕೆ ಮಾಡಿದ್ರೆ, ಮತ್ತೊಂದು ಕಡೆ ಇದೇ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ, ವೋಲ್ವೋ ಸೇರಿದಂತೆ ಹಲವು ವಾಹನಗಳು ಕೂಡಾ ಟಿಕೆಟ್ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ‌

ಒಟ್ಟಿನಲ್ಲಿ, ಪ್ರತಿ ‌ವರ್ಷ ಟೋಲ್ ದರ ಹೆಚ್ಚಿಸಿಕೊಂಡು ಬರುತ್ತಿರುವ ದೇವನಹಳ್ಳಿ ಟೋಲ್ ಅಧಿಕಾರಿಗಳು ಈ ಸಲವು ದರ ಹೆಚ್ಚಳ‌ ಮಾಡಿದ್ದಾರೆ. ಇದರಿಂದ ಟ್ಯಾಕ್ಸಿ ಚಾಲಕರು ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಮತ್ತಷ್ಟು ಶುಲ್ಕ ಹೆಚ್ಚಳದ ಬಿಸಿ ತಟ್ಟಿದ್ದು, ಮತ್ತೆ ಬಂದ್, ಸ್ಟ್ರೈಕ್ ಮಾಡುವ ಸಾಧ್ಯತೆ ಇದೆ.

ABOUT THE AUTHOR

...view details