ಕರ್ನಾಟಕ

karnataka

ETV Bharat / state

ದೆಹಲಿಯ ಧಾರ್ಮಿಕ  ಕಾರ್ಯಕ್ರಮದಲ್ಲಿ ನೆಲಮಂಗಲ 5 ಜನ ಭಾಗಿ : ಡಿಸಿ ಸ್ಪಷ್ಟನೆ

ನೆಲಮಂಗಲ ತಾಲೂಕಿನ ಲಕ್ಕೂರಿನ ನಿವಾಸಿಗಳಾದ 5 ಜನರು ದೆಹಲಿಯ ನಿಜಾಮುದ್ದಿನ್ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿನ್ನೆಲೆ 5 ಮಂದಿಯನ್ನೂ ಈಗ ಆಸ್ಪತ್ರೆಯ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

ದೆಹಲಿಯ ಧಾರ್ಮಿಕ  ಕಾರ್ಯಕ್ರಮದಲ್ಲಿ ನೆಲಮಂಗಲ 5 ಜನ ಭಾಗಿ
ದೆಹಲಿಯ ಧಾರ್ಮಿಕ  ಕಾರ್ಯಕ್ರಮದಲ್ಲಿ ನೆಲಮಂಗಲ 5 ಜನ ಭಾಗಿ

By

Published : Apr 1, 2020, 12:39 PM IST

ನೆಲಮಂಗಲ: ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ನೆಲಮಂಗಲ ತಾಲೂಕಿನ ಲಕ್ಕೂರಿನ 5 ಮಂದಿ ಪಾಲ್ಗೊಂಡಿದ್ದು, ಅವರನ್ನು ನೆಲಮಂಗಲದ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಇವರ ಸಂಪರ್ಕದಲ್ಲಿದ್ದ 23 ಮಂದಿಯನ್ನ ಹೋಮ್ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ. ನೆಲಮಂಗಲ ತಾಲೂಕಿನ ಲಕ್ಕೂರಿನ ನಿವಾಸಿಗಳಾದ 5 ಜನರು ದೆಹಲಿಯ ನಿಜಾಮುದ್ದಿನ್ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿನ್ನೆಲೆ 5 ಮಂದಿಯನ್ನೂ ಈಗ ಆಸ್ಪತ್ರೆಯ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

ಶಂಕಿತ ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಹಾಗೆಯೇ 5 ಜನರ ಸಂಪರ್ಕದಲ್ಲಿದ್ದ 23 ಜನರನ್ನ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. 23 ಜನರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿರುವ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎಸ್, ರವೀಂದ್ರ ತಿಳಿಸಿದ್ದಾರೆ.

ABOUT THE AUTHOR

...view details