ಕರ್ನಾಟಕ

karnataka

ETV Bharat / state

ಬಾಲ್ಯ ವಿವಾಹ ನಿರಾಕರಿಸಿ ಪ್ರಿಯಕರನ ಕೈ ಹಿಡಿದ ಯುವತಿ, ಅಪ್ಪ ಕಾಲಿಡಿದು ಗೋಗರೆದರೂ ಬರಲಿಲ್ಲ - ಬಾಲ್ಯವಿವಾಹ ನಿರಾಕರಿಸಿ ಯುವತಿ ಮದುತೆ

ಬಾಲ್ಯವಿವಾಹ ನಿರಾಕರಿಸಿದ ಯುವತಿ ಬಾಗಲಕೋಟೆಗೆ ಬಂದು ಪ್ರಿಯಕರನನ್ನು ವರಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

young-girl-oppose-child-marriage-dot
ಬಾಲ್ಯ ವಿವಾಹ ನಿರಾಕರಿಸಿ ಪ್ರಿಯಕರನ ಕೈ ಹಿಡಿದ ಯುವತಿ

By

Published : Oct 7, 2020, 7:29 PM IST

Updated : Oct 7, 2020, 8:43 PM IST

ಬಾಗಲಕೋಟೆ : ಬಾಲ್ಯವಿವಾಹ ನಿರಾಕರಿಸಿದ ತುಮಕೂರಿನ ಯುವತಿ ಬಾಗಲಕೋಟೆಗೆ ಬಂದು ಪ್ರಿಯಕರನನ್ನು ಮದುವೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ನವನಗರದ ಮುಚ ಖಂಡಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮದುವೆ ಆದರು.

ಆಕಾಶ್ ಮತ್ತು ಐಶ್ವರ್ಯಾ ಪ್ರೀತಿಸಿ ಮದುವೆಯಾದ ಜೋಡಿ. ಐಶ್ವರ್ಯಾ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಳ್ಳಿ ಗ್ರಾಮದ ನಿವಾಸಿ. ಆಕಾಶ್ ಬಾಗಲಕೋಟೆಯ ನವನಗರದ ನಿವಾಸಿ.

ಬಾಲ್ಯ ವಿವಾಹ ನಿರಾಕರಿಸಿ ಪ್ರಿಯಕರನ ಕೈ ಹಿಡಿದ ಯುವತಿ

ಐಶ್ವರ್ಯಗೆ 17 ವರ್ಷವಿದ್ದಾಗಲೇ ಮದುವೆಯಾಗಿತ್ತು. ಮದುವೆಯಾದ ಬಳಿಕವೂ ಯುವತಿ ಆಕಾಶ್ ಜತೆ ನಿರಂತರ ಸಂಪರ್ಕದಲ್ಲಿದ್ದಳು. ಕೊನೆಗೆ ಬಾಲ್ಯವಿವಾಹ ತನಗೆ ಇಷ್ಟವಿರಲಿಲ್ಲ ಎಂದು ಮೂರು ದಿನಗಳ ಹಿಂದೆ ಐಶ್ವರ್ಯಾ ಬಾಗಲಕೋಟೆಗೆ ಬಂದಿದ್ದಳು. ವಿವಾಹವಾದ ಬಳಿಕ ತಮಗೆ ಜೀವಭಯವಿದೆ ಅಂತೇಳಿ ಇಬ್ಬರೂ ಎಸ್​ಪಿ ಕಚೇರಿಗೆ ಬಂದಿದ್ದರು. ಇತ್ತ ಐಶ್ವರ್ಯಾ ತಂದೆ ಮತ್ತು ಸೋದರ ಸಹ ಬಾಗಲಕೋಟೆಗೆ ಆಗಮಿಸಿ, ತಮ್ಮ ಮಗಳನ್ನ ತಮ್ಮೊಂದಿಗೆ ಕಳಿಸಿಕೊಡಿ ಎಂದು ಯುವಕನ ಕಾಲಿಡಿದು ಗೋಗರೆದರು. ಆದರೂ ನವಜೋಡಿ ಬೇರೆಯಾಗದೆ, ನವಜೀವನ ನಡೆಸೋಕೆ ಶುರು ಮಾಡಿದ್ದಾರೆ.

ಐಶ್ವರ್ಯಾ ಜೊತೆ ಆಕಾಶ್ ಕುಟುಂಬಸ್ಥರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಗೆಳೆಯರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ. ಆಕಾಶ್ ಹಾಗೂ ಐಶ್ವರ್ಯ ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದರಿಂದ ಮದುವೆಗೆ ವಿರೋಧ ವ್ಯಕ್ತವಾಗಿತ್ತು.

Last Updated : Oct 7, 2020, 8:43 PM IST

ABOUT THE AUTHOR

...view details