ಬಾಗಲಕೋಟೆ :ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಬಂದ ಡಿಸಿಎಂ ಕಾರಜೋಳ ವಿರುದ್ಧ ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮುಧೋಳ ತಾಲೂಕಿನ ಒಂಟಿಗೋಡಿ ಗ್ರಾಮದಲ್ಲಿ ನಡೆದಿದೆ.
ಡಿಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ಘಟಪ್ರಭಾ ನದಿ ಪ್ರವಾಹ ಪೀಡಿತ ಪ್ರದೇಶಕ್ಕೆ ಇಂದು ಸಚಿವರು ಭೇಟಿ ನೀಡಿದ್ದರು. ಈ ವೇಳೆ ಪುನರ್ವಸತಿ ಕೇಂದ್ರದ ಕುರಿತು ಮನವಿ ಕೊಡಲು ಮಹಿಳೆಯರು ಮುಂದಾಗಿದ್ದರು. ಗ್ರಾಮ ಸ್ಥಳಾಂತರಕ್ಕೆ ಸೂಕ್ತ ಸೌಲಭ್ಯ ಇಲ್ಲ. ಕಳಪೆ ಗುಣಮಟ್ಟದ ಮನೆಗಳನ್ನು ಕಟ್ಟಿಸಿದ್ದಾರೆ. ಮೂಲಭೂತ ಸೌಲಭ್ಯ ಇಲ್ಲ ಎಂದು ಮಹಿಳೆಯರು ಆಕ್ರೋಶಗೊಂಡು ಕ್ಷೇತ್ರದ ಶಾಸಕರಾಗಿರುವ ಕಾರಜೋಳ ಅವರಿಗೆ ಮುತ್ತಿಗೆ ಹಾಕಿ ತಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ಮಳೆಯರು ಕಿರುಚಾಟ ಕಂಡು ಹೊರಟ ಕಾರಜೋಳ:
ಸಚಿವರು ಭೇಟಿ ನೀಡಿದ್ದ ವೇಳೆ ಗ್ರಾಮದ 50ಕ್ಕೂ ಹೆಚ್ಚು ಮಹಿಳೆಯರು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಕೂಗಾಟ, ಅರುಚಾಡ ತೊಡಗಿದರು. ಇದನ್ನು ಕಂಡು ಸಚಿವರು, ನಿಮ್ಮ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನಿವಿ ಕಳಿಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದರು. ಆದರೆ ಮಹಿಳೆಯರು ಆಕ್ರೋಶಗೊಂಡು ಸಚಿವರು ಮಾತು ಕೇಳಲು ನಿರಾಕರಿಸಿದಾಗ ಕಾರಜೋಳ ಅವರು ಕಾರು ಹತ್ತಿ ಹೊರಟು ಹೋದರು.
ಈ ಬಗ್ಗೆ ಮಹಿಳೆಯರು ಮಾತನಾಡಿ, ಯಾವುದೇ ಸೌಲಭ್ಯ ಇಲ್ಲದೆ ನಾವು ಜೀವನ ಸಾಗಿಸುತ್ತಿದ್ದೇವೆ. ಈ ಬಗ್ಗೆ ಯಾರೂ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಓದಿ: 'ಮೈತ್ರಿ' ಮುರಿದು ಗದ್ದುಗೆ ಏರಿದ ಸಿಎಂಗೆ 2 ವರ್ಷ: ಯಡಿಯೂರಪ್ಪ ಕಾಡಿದ ಪ್ರಕರಣಗಳು ಯಾವುವು ಗೊತ್ತಾ..!