ಬಾಗಲಕೋಟೆ:ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರು ಪ್ರಚಾರಕ್ಕೆ ತೆರಳುತ್ತಿರುವ ಸಮಯದಲ್ಲಿ ರಸ್ತೆ ಅಪಘಾತದಿಂದ ತೊಂದರೆಗೆ ಒಳಗಾಗಿದ್ದ ವೃದ್ಧನನ್ನು ಉಪಚರಿಸಿ, ವೈದ್ಯಕೀಯ ಚಿಕಿತ್ಸೆ ನೀಡಲು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು.
ಅಪಘಾತಕ್ಕೊಳಗಾದ ವೃದ್ಧನಿಗೆ ವಾಹನ ನಿಲ್ಲಿಸಿ ಉಪಚಾರ... ಮಾನವೀಯತೆ ಮೆರೆದ ವೀಣಾ ಕಾಶಪ್ಪನವರ್ - ವೀಣಾ ಕಾಶಪ್ಪನವರ್
ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರು ರಸ್ತೆ ಅಪಘಾತದಿಂದ ತೊಂದರೆಗೆ ಒಳಗಾಗಿದ್ದ ವೃದ್ಧನಿಗೆ ನೀರು ಕೊಟ್ಟು ಉಪಚರಿಸಿ ತಾಲೂಕು ಆಸ್ಪತ್ರೆಗೆ ಕರೆ ಮಾಡಿ, ಅಪಘಾತಕ್ಕೊಳಗಾದವರನ್ನು ಆರೈಕೆ ಮಾಡುವಂತೆ ವೈದ್ಯರಿಗೆ ತಿಳಿಸಿ ತಮ್ಮ ಕಡೆಯವರ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಲಕಲ್ಲ ಪಟ್ಟಣದ ಶೂಲಿಭಾವಿ ಗ್ರಾಮದಿಂದ ಪ್ರಚಾರ ಮುಗಿಸಿಕೊಂಡು ಜಮಖಂಡಿ ಪಟ್ಟಣಕ್ಕೆ ಹೋಗುತ್ತಿದ್ದ ಸಮಯದಲ್ಲಿ ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿದೆ. ಇದರ ಪರಿಣಾಮ ಓರ್ವ ಯುವಕ ಹಾಗೂ ವೃದ್ಧ ಗಾಯಗೊಂಡಿದ್ದಾರೆ. ತಳಿಕೇರಿ ಗ್ರಾಮದ ರುದ್ರಗೌಡ, ದ್ಯಾಮನಗೌಡ ಗೌಡರ ಎಂಬುವವರು ಗಾಯಗೊಂಡಿದ್ದಾರೆ.
ಅದೇ ದಾರಿಯಲ್ಲಿ ಹೋಗುತ್ತಿದ್ದ ವೀಣಾ ಕಾಶಪ್ಪನವರ ವಾಹನ ನಿಲ್ಲಿಸಿ, ವೃದ್ಧನಿಗೆ ನೀರು ಕೊಟ್ಟು ಉಪಚರಿಸಿದರು. ಅಲ್ಲದೆ ಹುನಗುಂದ ತಾಲೂಕು ಆಸ್ಪತ್ರೆಗೆ ಕರೆ ಮಾಡಿ, ಅಪಘಾತಕ್ಕೊಳಗಾದವರನ್ನು ಆರೈಕೆ ಮಾಡುವಂತೆ ವೈದ್ಯರಿಗೆ ತಿಳಿಸಿ ತಮ್ಮ ಕಡೆಯವರ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.