ಬಾಗಲಕೋಟೆ:ಜಿಲ್ಲೆಯಲ್ಲಿ ಕೃಷ್ಣಾ ನದಿ ಪ್ರವಾಹ ಮುಂದುವರೆದಿರುವ ಪರಿಣಾಮ ಜಮಖಂಡಿ ತಾಲ್ಲೂಕಿನ ಮುತ್ತೂರು, ಕಡಕೋಳ ಗ್ರಾಮ ಪೂರ್ಣ ಜಲಾವೃತಗೊಂಡಿದ್ದು, ಮನೆಯ ಮಹಡಿ ಮೇಲೆ ಜಾನುವಾರು ಕಟ್ಟಿಕೊಂಡು ರಕ್ಷಣೆ ಮಾಡಲಾಗಿದೆ.
ಬಾಗಲಕೋಟೆ: ಪ್ರವಾಹದಿಂದ ರಕ್ಷಿಸಲು ಮಹಡಿಯ ಮೇಲೆ ರಾಸುಗಳ ಸಾಕಣೆ - flood
ಕೃಷ್ಣಾ ನದಿ ಪ್ರವಾಹಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದ್ದು, ಜನರು ಮಾತ್ರವಲ್ಲದೆ ಜಾನುವಾರಗಳು ಸಂಕಷ್ಟಕ್ಕೆ ಸಿಲುಕಿದ್ದು, ನೂರಕ್ಕು ಹೆಚ್ಚು ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ.
ಬಾಗಲಕೋಟೆಯಲ್ಲಿ ಪ್ರವಾಹಕ್ಕೆ ಸಿಲುಕ್ಕಿದ್ದ ಜಾನುವಾರುಗಳ ರಕ್ಷಣೆ
ಮುತ್ತೂರು ಗ್ರಾಮದ ಮಾಜಿ ಗ್ರಾಪಂ ಅಧ್ಯಕ್ಷ ಮಹಾವೀರ ಪಾಟೀಲ್ ಜಾನುವಾರು ಉಳಿಸಿಕೊಳ್ಳಲು ಸಹಕಾರ ನೀಡಿದ್ದಾರೆ. ಮರದ ಮೇಲೆ ಕೂತಿದ್ದರವನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಹಗ್ಗದ ಆಸರೆ ಮೂಲಕ ಸ್ಥಳೀಯರ ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ.
ಕಡಕೋಳ ಗ್ರಾಮದಲ್ಲಿ ಸಿಲುಕಿದ 100ಕ್ಕೂ ಹೆಚ್ಚು ಜಾನುವಾರುಗಳನ್ನು ಬೋಟ್ ಮೂಲಕ ಸಾಗಿಸುವಲ್ಲಿ ಯಶಸ್ವಿಯಾದರು.