ಕರ್ನಾಟಕ

karnataka

ETV Bharat / state

ಸಾರ್ವಜನಿಕರ ಮೇಲೆ ಪೊಲೀಸರಿಂದ ದೌರ್ಜನ್ಯ.. ಖಾಕಿ ವರ್ತನೆ ವಿರುದ್ಧ ಅಸಮಾಧಾನ..

ಔಷಧಿ ತರಲು ಹೊರಬಂದ ಮಹೇಶ್ ಬಾಡಗಂಡಿ ಎಂಬ ಯುವಕನಿಗೆ ನವನಗರ ಪಿಎಸ್ಐ​ ಕಲ್ಮೇಶ್ ಬನ್ನೂರು ಲಾಠಿಯಿಂದ ತಲೆಯ ಭಾಗಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

police-attack-to-public-people-in-bagalkot
ಸಾರ್ವಜಿನಿಕರ ಮೇಲೆ ಪೊಲೀಸರ ದೌರ್ಜನ್ಯ

By

Published : Mar 30, 2020, 4:34 PM IST

ಬಾಗಲಕೋಟೆ :ಭಾರತ್ ಲಾಕ್‌ಡೌನ್ ಆಗಿರುವ ಹಿನ್ನೆಲೆ ಜನರನ್ನು ಚದುರಿಸುವ ಹೆಸರಲ್ಲಿ ಇಲ್ಲಿನ ನವನಗರ ಪಿಎಸ್​ಐ ಸೇರಿದಂತೆ ಇತರ ಸಿಬ್ಬಂದಿ ವಿನಾಕಾರಣ ಸಾರ್ವಜಿನಕರ ಮೇಲೆ ದೌರ್ಜನ್ಯ ಎಸೆಗುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಔಷಧಿ ತರಲು ಹೊರಬಂದ ಮಹೇಶ್ ಬಾಡಗಂಡಿ ಎಂಬ ಯುವಕನಿಗೆ, ನವನಗರ ಪಿಎಸ್ಐ​ ಕಲ್ಮೇಶ್ ಬನ್ನೂರು ಲಾಠಿಯಿಂದ ತಲೆಯ ಭಾಗಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹೊಡೆದ ರಭಸಕ್ಕೆ ಯುವಕನ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಿ 12 ಸ್ಟಿಚ್ ಹಾಕಲಾಗಿದೆ.

ಸಾರ್ವಜಿನಿಕರ ಮೇಲೆ ಪೊಲೀಸರಿಂದ ದೌರ್ಜನ್ಯ..

ಇದೇ ಸಮಯದಲ್ಲಿ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ಸಿಬ್ಬಂದಿ ಜಯಪ್ರಕಾಶ್ ನಾಗಠಾಣ ಎಂಬುವರ ಮೇಲೆಯೂ ಪೊಲೀಸ್ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಆತ ಈಗ ಕಾಲು ನೋವಿನಿಂದ ಬಳಲುತ್ತಿದ್ದಾರೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಪೊಲೀಸರ ವರ್ತನೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ABOUT THE AUTHOR

...view details