ಕರ್ನಾಟಕ

karnataka

ETV Bharat / state

ಅನೈತಿಕ ಸಂಬಂಧ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಮುಗಿಸಿದಳು

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯೇ ತನ್ನ ಪ್ರಿಯಕರನ ಜತೆಗೂಡಿ ಪತಿಯನ್ನು ಕೊಲ್ಲಿಸಿದ ಆರೋಪ ಬಾಗಲಕೋಟೆಯಲ್ಲಿ ಕೇಳಿಬಂದಿದೆ.

person murdered by his wife
ಪತಿಯ ಕೊಲೆ

By

Published : May 9, 2020, 1:00 PM IST

Updated : May 9, 2020, 1:38 PM IST

ಬಾಗಲಕೋಟೆ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನು ಕೊಲೆ ಮಾಡಿಸಿರುವ ಆರೋಪ ಹುನಗುಂದ ತಾಲೂಕಿನ ಮರೋಳ ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ತೋಟದಲ್ಲಿ ನಡೆದಿದೆ.

50 ವರ್ಷದ ಶೇಖಪ್ಪ ಕೊಂಡೆಕಾರ ಎಂಬುವವನು ಕೊಲೆ ಆಗಿರುವ ವ್ಯಕ್ತಿಯಾಗಿದ್ದು, ಪತ್ನಿ ಶಾಂತವ್ವ(45) ಹಾಗೂ ಆಕೆಯ ಪ್ರಿಯಕರ ಶರಣಪ್ಪ ಅಂಬಿಗೇರ(42) ಕೊಲೆ ಆರೋಪಿಗಳಾಗಿದ್ದಾರೆ.

ಏಪ್ರಿಲ್ 24 ರಂದು ಶೇಖಪ್ಪನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿ, ನಂತರ ಮೃತದೇಹವನ್ನು ಎರಡು ತುಂಡು ಮಾಡಿ, ಸಮೀಪದಲ್ಲಿರುವ ಕೃಷ್ಣಾ ನದಿಯ ಬಳಿ ಮುಚ್ಚಿದ್ದಾರೆ. ನಂತರ ಪತಿ ಕಾಣೆಯಾಗಿದ್ದಾನೆಂದು ಪತ್ನಿಯೇ ಹುನಗುಂದ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪಿಎಸ್ ಐ ಪಿ.ಎಮ್.ಪಟಾತರ ಮೊಬೈಲ್​ ಕರೆಗಳ ಮಾಹಿತಿ ಪರಿಶೀಲನೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ ನಡೆದ ಸ್ಥಳಕ್ಕೆ ಜಿಲ್ಲಾ ಎಸ್​​ಪಿ ಲೋಕೇಶ್​ ಜಲಸಾಗರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಲಾಗುತ್ತಿದೆ.

Last Updated : May 9, 2020, 1:38 PM IST

ABOUT THE AUTHOR

...view details