ಬಾಗಲಕೋಟೆ :ದೇಶದಲ್ಲಿ ನೂರು ಕೋಟಿ ಜನರಿಗೆ ಕೊರೊನಾ ಲಸಿಕಾ ಅಭಿಯಾನ ಯಶಸ್ವಿಯಾದ ಹಿನ್ನೆಲೆ ಕೇಂದ್ರ ಸರ್ಕಾರ ಪ್ರಮುಖ ಪ್ರವಾಸಿ ತಾಣಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಿತ್ತು. ಅದರಂತೆ ಪಟ್ಟದಕಲ್ಲು ಹಾಗೂ ಐಹೊಳೆ ಗಮನ ಸೆಳೆದವು.
ತ್ರಿವರ್ಣ ವಿದ್ಯುತ್ ದೀಪಾಲಂಕಾರದಿಂದ ಗಮನ ಸೆಳೆದ ಪಟ್ಟದಕಲ್ಲು ಹಾಗೂ ಐಹೊಳೆ.. ಕೋವಿಡ್ ಲಸಿಕಾ ಅಭಿಯಾನದಲ್ಲಿ ದೇಶ ಐತಿಹಾಸಿಕ ಸಾಧನೆ ಮಾಡಿದ ಹಿನ್ನೆಲೆ ದೇಶಾದ್ಯಂತ ಸುಮಾರು 100 ಸ್ಮಾರಕಗಳಿಗೆ ಕೇಂದ್ರ ಸರ್ಕಾರದ ಆದೇಶದಂತೆ ವಿದ್ಯುತ್ ಅಲಂಕಾರ ಮಾಡಲಾಗಿತ್ತು.
ಅದರಂತೆ ವಿಶ್ವಪರಂಪರೆ ಹೊಂದಿರುವ ಐಹೊಳೆಗಳು ಹಾಗೂ ಪಟ್ಟದಕಲ್ಲು ದೇಗುಲಗಳ ಸಮುಚ್ಚಯಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಪ್ರಮುಖವಾಗಿ ಕೇಸರಿ, ಬಿಳಿ, ಹಸಿರು ಬಣ್ಣಗಳ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಈ ಮೂಲಕ ಜನರ ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದವು.
ಪಟ್ಟದಕಲ್ಲಿನಲ್ಲಿ ಸಂಗಮನಾಥ, ಮಲ್ಲಿಕಾರ್ಜುನ, ಕಾಶಿ ವಿಶ್ವನಾಥ, ಗಳಗನಾಥ ಹೀಗೆ ವಿವಿಧ ದೇವಾಲಯಗಳು ಸೇರಿದಂತೆ ಐಹೊಳೆಯ ದುರ್ಗಾ ದೇವಾಲಯವೂ ವಿದ್ಯುತ್ ಅಲಂಕಾರದಿಂದ ಗಮನ ಸೆಳೆದವು.
ಐದು ದಿನಗಳ ಕಾಲ ದೀಪಾಂಲಕಾರ ಇರಲಿದೆ. ಸಂಜೆಯಿಂದ ರಾತ್ರಿ 12 ಗಂಟೆಯವರೆಗೆ ವಿದ್ಯುತ್ ದೀಪಗಳು ಕಂಗೊಳಿಸಲಿವೆ. ಸಾರ್ವಜನಿಕ ಪ್ರವೇಶಕ್ಕೆ ಅವಕಾಶವಿಲ್ಲವಾದರೂ ಹೂರಗೆ ನಿಂತ ಜನರು ವೀಕ್ಷಣೆ ಮಾಡಬಹುದಾಗಿದೆ. ರಾಜ್ಯದಲ್ಲಿ ಪಟ್ಟದಕಲ್ಲು, ಐಹೊಳೆ, ವಿಜಯಪುರ ಹಾಗೂ ಹಂಪಿಯಲ್ಲಿರುವ ಐತಿಹಾಸಿಕ ಸ್ಮಾರಕಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.
ಇದನ್ನೂ ಓದಿ: ಕೋವಿಡ್ ಲಸಿಕೆ ಅಭಿಯಾನ ಯಶಸ್ವಿ: ತ್ರಿವರ್ಣ ವಿದ್ಯುತ್ ದೀಪಾಲಂಕಾರದಿಂದ ಹಂಪಿ ಸ್ಮಾರಕಗಳಿಗೆ ಮೆರುಗು