ಬಾಗಲಕೋಟೆ:ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ರೈತರೊಬ್ಬರು ಸಾಕಿದ ಎತ್ತನ್ನು ದಾಖಲೆಯ 13.5 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. 'ರಾಜ' ಎಂಬ ಹೆಸರಿನ ಕಾಲರಿ ಎತ್ತು ಈ ಹಿಂದೆ ಹಲವು ಬಂಡಿ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿತ್ತು.
ನಾವಲಗಿ ಗ್ರಾಮದ ಹೊಳೆಪ್ಪ ಸಂಗಪ್ಪ ಅವರು ಕೇವಲ ಏಳು ತಿಂಗಳ ಹಿಂದೆ 1 ಲಕ್ಷ ರೂಪಾಯಿಗೆ ಬೈಲಹೊಂಗಲದ ರೈತನೋರ್ವನಿಂದ ಈ ಎತ್ತನ್ನು ಖರೀದಿಸಿದ್ದರು. ಎತ್ತಿಗೆ ಈಗ 5 ವರ್ಷವಾಗಿದ್ದು, ಮುಧೋಳ ತಾಲೂಕಿನ ವಂಟಗೂಡಿ ಗ್ರಾಮದ ರೈತ ಭೀಮಶಿ ಐನಾಪುರ ಎಂಬುವರಿಗೆ ಮಾರಾಟ ಮಾಡಲಾಗಿದೆ.