ಬಾಗಲಕೋಟೆ: ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಪಿಡಿಓ, ಸ್ಥಳೀಯ ಆರೋಗ್ಯಾಧಿಕಾರಿಗಳು ಮುಂಜಾಗರೂಕತಾ ಕ್ರಮಗಳಿಗೆ ಮುಂದಾಗದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಆರೋಗ್ಯ ಅಧಿಕಾರಿಗಳಿಂದ ನಡೆಯದ ತಪಾಸಣೆ: ಗ್ರಾಮಸ್ಥರಿಂದ ಆಕ್ರೋಶ
ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಪಿಡಿಓ, ಸ್ಥಳೀಯ ಆರೋಗ್ಯ ಅಧಿಕಾರಿಗಳಿಂದ ಯಾವುದೇ ತಪಾಸಣಾ ಕಾರ್ಯ ನಡೆಯದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಆರೋಗ್ಯ ಅಧಿಕಾರಿಗಳಿಂದ ನಡೆಯದ ತಪಾಸಣೆ.
ಮಾರಕ ವೈರಸ್ ಬಗ್ಗೆ ಗ್ರಾಮದಲ್ಲಿ ಜನ ಜಾಗೃತಿಯೂ ಇಲ್ಲದಂತಾಗಿದೆ. ಗ್ರಾಮದತ್ತ ಗ್ರಾ.ಪಂ.ಅಧಿಕಾರಿಗಳು ಸುಳಿಯುತ್ತಿಲ್ಲ. ಸಮಸ್ಯೆ ಹೇಳಿದವರಿಗೆ ಪಿಡಿಓ ಉಡಾಫೆ ಉತ್ತರ ಕೊಡುತ್ತಾರೆ ಅನ್ನೋದು ಇಲ್ಲಿನ ಜನರ ಆರೋಪ.