ಬಾಗಲಕೋಟೆ : ಮುಖ್ಯಮಂತ್ರಿ ಸ್ಥಾನ ಬದಲಾವಣೆ ಎಂಬುದು ಊಹಾಪೋಹ, ಈಗಾಗಲೇ ನಮ್ಮ ವರಿಷ್ಠರು ಇದಕ್ಕೆ ತೆರೆ ಎಳೆದಿದ್ದಾರೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಸ್ಪಷ್ಟ ಪಡಿಸಿದ್ದಾರೆ.
ಅವರು ಬಾಗಲಕೋಟೆ ನವನಗರದ ಪ್ರೆಸ್ ಕಬ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ರಾಜ್ಯ ಉಸ್ತುವಾರಿಗಳು ಸ್ಪಷ್ಟವಾಗಿ ಸಂದೇಶ ನೀಡಿದ್ದಾರೆ. ಇದರ ಕುರಿತು ಮಾತನಾಡುವ ಅಗತ್ಯ ಇಲ್ಲ. ಸುಳ್ಳನ್ನೇ ಹತ್ತು ಸಲ ಹೇಳಿ ಪ್ರಚಾರ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಓದಿ-ಪಕ್ಷದ ಸಿದ್ಧಾಂತಗಳನ್ನು ನೋಡಿ ಜನ ಮತ ಹಾಕಿದ್ದಾರೆ : ಡಾ. ಅಶ್ವತ್ಥ್ ನಾರಾಯಣ್