ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪನವರ ಪುತ್ರಿ ಶಾಂತಾ ಕೆ ಅವರ ಜೆ-6 ಮಾಡೆಲ್ನ ಮೊಬೈಲ್ ನಾಪತ್ತೆಯಾಗಿದ್ದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಬಂಟನೂರು ಗ್ರಾಮದ ಲಕ್ಷ್ಮಣ ಬಂಡಿವಡ್ಡರ ಎಂಬಾತನ ಮನೆಯಲ್ಲಿ ಸಿಕ್ಕಿದೆ.
ಸಚಿವರ ಮಗಳ ಮೊಬೈಲ್ ಕಳ್ಳತನ: ಸಿಕ್ಕಿಬಿದ್ದ ಬಿಜೆಪಿ ಕಾರ್ಯಕರ್ತ
ಸಚಿವ ಕೆ.ಎಸ್.ಈಶ್ವರಪ್ಪ ಮಗಳು ಕೆ.ಶಾಂತಾ ಅವರ ಮೊಬೈಲ್ ಸೆಪ್ಟಂಬರ್ 13ರಂದು ಮನೆಯಿಂದ ಕಳ್ಳತನವಾಗಿದ್ದು, ಈಗ ಬಾಗಲಕೋಟೆ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಸಿಕ್ಕಿದೆ.
ಆರೋಪಿ ಲಕ್ಷ್ಮಣ ಬಂಡಿವಡ್ಡರ
ಬಂಟನೂ ಗ್ರಾಮದ ಲಕ್ಷ್ಮಣ ಬಂಡಿವಡ್ಡರ ಬಿಜೆಪಿ ಕಾರ್ಯಕರ್ತ. ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದ ಸಮಯದಲ್ಲಿ ಲಕ್ಷ್ಮಣ ಬಂಡಿವಡ್ಡರ ಮೊಬೈಲ್ ಕದ್ದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಸೆಪ್ಟಂಬರ್ 13ರಂದು ಗಾಂಧಿ ಭವನದ ಸಚಿವರ ನಿವಾಸದಿಂದ ಮೊಬೈಲ್ ಕಳ್ಳತನವಾದ ಬಗ್ಗೆ ಕೆ. ಶಾಂತಾ ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸಿದ್ದರು. ಮೊಬೈಲ್ ಐಎಂಇಐ ನಂಬರ್ ಮೂಲಕ ಬಂಟನೂರು ಗ್ರಾಮದಲ್ಲಿ ಮೊಬೈಲ್ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಳಿಕ ಲಕ್ಷ್ಮಣ ಬಂಡಿವಡ್ಡರ ಮನೆಯಲ್ಲಿದ್ದ ಮೊಬೈಲನ್ನು ಲೋಕಾಪುರ ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.