ಕರ್ನಾಟಕ

karnataka

ETV Bharat / state

ಹೃದಯ ಸಂಬಂಧಿ ಕಾಯಿಲೆ ನಡುವೆ ವಿದ್ಯಾರ್ಥಿನಿ ಸಾಧನೆ: ಶಾಸಕರಿಂದ ಹೂಗುಚ್ಛ ನೀಡಿ ಶುಭಾಶಯ - Veeranna Charanthimathu visits student's Gangnamma home

ಮುಚಖಂಡಿ ತಾಂಡಾದ ದುರ್ಗಾದೇವಿ ಹೈಸ್ಕೂಲ್​ನಲ್ಲಿ ಅಧ್ಯಯನ ಮಾಡಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿನಿ ಗಂಗಮ್ಮ ರಾಜ್ಯದ ಜನರ ಗಮನ ಸೆಳೆದಿದ್ದಳು. ಹೀಗಾಗಿ, ಶಾಸಕರು ಭೇಟಿ ನೀಡಿ ಹೂ ಗುಚ್ಛ ಕೊಟ್ಟು ಅಭಿನಂದಿಸಿದರು.

mla-veeranna-charanthimata-visits-student-gangammas-home
ವಿದ್ಯಾರ್ಥಿನಿ ಗಂಗಮ್ಮಗೆ ಹೂಗುಚ್ಛ ನೀಡಿ ಶುಭಾಶಯ ಹೇಳಿದ ಶಾಸಕರು

By

Published : Aug 10, 2021, 6:31 PM IST

Updated : Aug 10, 2021, 7:10 PM IST

ಬಾಗಲಕೋಟೆ:ಹೃದಯ ಸಂಬಂಧಿ ಕಾಯಿಲೆ ನಡುವೆಯೂ ಎಸ್ಎಸ್​ಎಲ್​ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕಗಳಿಸಿದ ವಿದ್ಯಾರ್ಥಿನಿ ಗಂಗಮ್ಮ ಮನೆಗೆ ಶಾಸಕ ವೀರಣ್ಣ ಚರಂತಿಮಠ ಅವರು ಭೇಟಿ ನೀಡಿ ಶುಭಾಶಯ ತಿಳಿಸಿದ್ದಾರೆ.

ಶಾಸಕ ವೀರಣ್ಣ ಚರಂತಿಮಠ

ಮುಚಖಂಡಿ ತಾಂಡಾದ ದುರ್ಗಾದೇವಿ ಹೈಸ್ಕೂಲ್​ನಲ್ಲಿ ಅಧ್ಯಯನ ಮಾಡಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿನಿ ಗಂಗಮ್ಮ ರಾಜ್ಯದ ಜನರ ಗಮನ ಸೆಳೆದಿದ್ದಳು. ಹೀಗಾಗಿ, ಶಾಸಕರು ಭೇಟಿ ನೀಡಿ ಹೂ ಗುಚ್ಛ ಕೊಟ್ಟು ಅಭಿನಂದಿಸಿದರು.

ಈ ಬಗ್ಗೆ ಶಾಸಕ ವೀರಣ್ಣ ಚರಂತಿಮಠ ಮಾತನಾಡಿದರು. ಬವಿವಿ ಸಂಘದಲ್ಲಿ ಗಂಗಮ್ಮಳಿಗೆ ಮುಂದಿನ ವಿದ್ಯಾಭ್ಯಾಸವನ್ನ ಉಚಿತವಾಗಿ ನೀಡಲಾಗುವುದು. ವಿದ್ಯಾರ್ಥಿನಿಗೆ ಆರೋಗ್ಯ ಸಮಸ್ಯೆಯಿದೆ. ಅದರ ಬಗ್ಗೆಯೂ ಗಮನ ಹರಿಸುತ್ತೇನೆ. ನಮ್ಮ ಕುಮಾರೇಶ್ವರ ಆಸ್ಪತ್ರೆಯಲ್ಲಿ ಎಲ್ಲವೂ ಉಚಿತವಾಗಿ ಚಿಕಿತ್ಸೆ ಕೊಡಿಸಲಾಗುವುದು. ಹಾಗೆಯೇ ಅವಳ ಉನ್ನತ ಮಟ್ಟದ ಸಾಧನೆಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

ಓದಿ:ಹುಬ್ಬಳ್ಳಿ-ಧಾರವಾಡ ಮಧ್ಯೆ ಖಾಸಗಿ ಬಸ್ ಸಂಚಾರಕ್ಕೆ ಸರ್ಕಾರದ ಒತ್ತು: ಸಾರ್ವಜನಿಕರಿಂದ ಆಕ್ರೋಶ

Last Updated : Aug 10, 2021, 7:10 PM IST

ABOUT THE AUTHOR

...view details