ಕರ್ನಾಟಕ

karnataka

ETV Bharat / state

ಬದುಕಿದ್ದರೆ ಇದೇ ಅವಧಿಗೆ ಮುಖ್ಯಮಂತ್ರಿ, ಸತ್ತರೆ ಏನ್ಮಾಡೋದು?- ಸಚಿವ ಕತ್ತಿ ಹಾಸ್ಯಚಟಾಕಿ - ಬಾಗಲಕೋಟೆಯಲ್ಲಿ ಸಿಎಂ ಆಗುವ ಬಯಕೆ ಹೊರಹಾಕಿದ ಸಚಿವ ಉಮೇಶ ಕತ್ತಿ

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಸಚಿವ ಉಮೇಶ ಕತ್ತಿ, ಹಾಸ್ಯ ಚಟಾಕಿಯಿಂದಲೇ ಮುಖ್ಯಮಂತ್ರಿ ಆಗುವ ಬಯಕೆಯನ್ನು ಮತ್ತೆ ವ್ಯಕ್ತಪಡಿಸಿದರು.

Minister Umesh Katti  Flag hosting in Bagalkot
ಹ್ಯಾಸ ಚಟಾಕಿಯಿಂದಲೇ ಸಿಎಂ ಆಗುವ ಬಯಕೆ ಹೊರಹಾಕಿದ ಸಚಿವ ಕತ್ತಿ

By

Published : Aug 15, 2021, 1:00 PM IST

ಬಾಗಲಕೋಟೆ: ಬದುಕಿದ್ದರೆ ಇದೇ ಅವಧಿಗೆ ಮುಖ್ಯಮಂತ್ರಿ ಆಗುವೆ, ಸತ್ತರೆ ಏನ್ಮಾಡುವುದು?, ಮುಂಬರುವ ಕೆಲವೇ ದಿನಗಳಲ್ಲಿ ಮತ್ತೆ ಮುಖ್ಯಮಂತ್ರಿ ಆಗಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಸಿಎಂ ಸ್ಥಾನದ ಮನದಿಂಗಿತ ವ್ಯಕ್ತಪಡಿಸಿದರು.

ಬಾಗಲಕೋಟೆ ನಗರದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವರು, ತೆರೆದ ವಾಹನದ ಮೂಲಕ ಪರೇಡ್ ವೀಕ್ಷಣೆ ಮಾಡಿದರು‌. ನಂತರ ಆಕರ್ಷಕ ಪಥಸಂಚಲನ ಜರುಗಿತು.

ನಂತರ ಮಾತನಾಡುತ್ತಾ, ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯವರೇ ಆದಲ್ಲಿ ಒಳ್ಳೆಯದು. ಅಭಿವೃದ್ಧಿಗೆ ಅನುಕೂಲ. ನನಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಆಗುವ ಆಸೆ ಇದೆ. ಆದರೆ ಆಯಾ ಜಿಲ್ಲೆಯವರೇ ಉಸ್ತುವಾರಿ ಆಗಬಾರದು ಅನ್ನೋದು ಪಕ್ಷದ ನಿರ್ಧಾರ ಎಂದು ಸ್ಪಷ್ಟನೆ ಕೊಟ್ಟರು.

ಇಂದಿರಾ ಕ್ಯಾಟೀನ್​ಗೆ ‘ಅನ್ನಪೂರ್ಣೇಶ್ವರಿ’ ಎಂದು ನಾಮಕರಣ ಮಾಡುವ ಉದ್ದೇಶ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರವಾಹದಿಂದ ಉಂಟಾದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಜರುಗಿಸಲಾಗಿದೆ‌‌. ಲೋಕೋಪಯೋಗಿ ಇಲಾಖೆಯಿಂದ ಒಟ್ಟು 402.62 ಕೋಟಿ ರೂಪಾಯಿ ವೆಚ್ಚದಲ್ಲಿ 376.22 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಕೊರೊನಾ ಲಸಿಕೆ ನೀಡುವ ಜೊತೆಗೆ ರೋಗವನ್ನು ಹತೋಟಿಗೆ ತರಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಕತ್ತಿ ತಿಳಿಸಿದರು.

ಇದೇ ಸಮಯದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ, ಮುಧೋಳ ವೃತ್ತದ ಸಿಪಿಐ ದಾದಪೀರ ಅತ್ರಾವತ ಸೇರಿದಂತೆ ಹಾಗೂ ಅಗ್ನಿಶಾಮಕ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ, ಸೈನಿಕರು ಮತ್ತು ರಾಷ್ಟ್ರ ಮತ್ತು ರಾಜ್ಯಮಟ್ಟದ ಕ್ರೀಡಾಪಟು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಸಾಧನೆ ಮಾಡಿದ ವಿದ್ಯಾರ್ಥಿನಿ ಕುಮಾರಿ ಗಂಗಮ್ಮ ಬಸಪ್ಪ ಹುಡೇದ ಅವರನ್ನೂ ಕೂಡಾ ಇದೇ ವೇಳೆ ಸನ್ಮಾನಿಸಲಾಯಿತು.

For All Latest Updates

ABOUT THE AUTHOR

...view details