ಕರ್ನಾಟಕ

karnataka

ಸುಟ್ಟು ಕರಕಲಾದ ಶಾಪಿಂಗ್​ ಕಾಂಪ್ಲೆಕ್ಸ್​: ಅಂದಾಜು 10 ಕೋಟಿ ನಷ್ಟ

By

Published : Feb 8, 2021, 2:10 PM IST

ಶಾಪಿಂಗ್​ ಕಾಂಪ್ಲೆಕ್ಸ್​ನಲ್ಲಿರುವ ಹಾರ್ಡ್​ವೇರ್​ ಅಂಗಡಿಯಲ್ಲಿ ಶಾರ್ಟ್​ ಸರ್ಕ್ಯೂಟ್​ ಸಂಭವಿಸಿದ ಪರಿಣಾಮ ಇಡೀ ಕಟ್ಟಡ ಬೆಂಕಿಯಲ್ಲಿ ಬೆಂದು ಹೋದ ಪರಿಣಾಮ ಸುಮಾರು 10 ಕೋಟಿ ರೂ. ನಷ್ಟವಾಗಿದೆ.

massive fire
ಶಾಪಿಂಗ್​ ಕಾಂಪ್ಲೆಕ್ಸ್​ನಲ್ಲಿ ಬೆಂಕಿ

ಬಾಗಲಕೋಟೆ:ಇಲಕಲ್ಲ ಪಟ್ಟಣದಲ್ಲಿ ಕಳೆದ ರಾತ್ರಿ ಶಾಪಿಂಗ್ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 10 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಶಾಪಿಂಗ್​ ಕಾಂಪ್ಲೆಕ್ಸ್​ನಲ್ಲಿ ಬೆಂಕಿ

ಮಹೇಶಪ್ಪ ಸಜ್ಜನ್​ ಎಂಬುವರಿಗೆ ಸೇರಿದ ಕಾಂಪ್ಲೆಕ್ಸ್​ ಇದಾಗಿದೆ. ಮೂರು ಅಂತಸ್ತಿನ ಈ ಕಟ್ಟಡವನ್ನು ಸುಮಾರು 3 ಕೋಟಿಗೂ ಅಧಿಕ ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ಹಾರ್ಡವೇರ್, ಸಿಲ್ಕ್​ ಸಾರಿ ಶಾಪ್​ ಸೇರಿದಂತೆ ಮೋರ್ ಮಾಲ್ ಸಹ ಇತ್ತು. ಇದರ ಜೊತೆಗೆ ಲಾಡ್ಜ್ ಸಹ ನಿರ್ಮಾಣ ಆಗಿತ್ತು. ಕೆಲ ದಿನಗಳಲ್ಲೇ ಇನ್ನೊಂದು ಮಳಿಗೆ ಉದ್ಘಾಟನೆಗೆ ಸಿದ್ಧತೆ ಮಾಡಲಾಗಿತ್ತು. ಅಷ್ಟರಲ್ಲೇ ಅಗ್ನಿ ನರ್ತನಕ್ಕೆ ಕಾಂಪ್ಲೆಕ್ಸ್​ ಸುಟ್ಟು ಕರಕಲಾಗಿದೆ.

ಶಾಪಿಂಗ್​ ಕಾಂಪ್ಲೆಕ್ಸ್​ನಲ್ಲಿರುವ ಹಾರ್ಡ್​ವೇರ್​ ಅಂಗಡಿಯಲ್ಲಿ ಶಾರ್ಟ್​ ಸರ್ಕ್ಯೂಟ್​ ಉಂಟಾದ ಪರಿಣಾಮ ಇಡೀ ಕಟ್ಟಡ ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಇಲಕಲ್ಲನಲ್ಲಿ ಹೊತ್ತಿ ಉರಿದ ಶಾಪಿಂಗ್ ಕಾಂಪ್ಲೆಕ್ಸ್​​: ಕೋಟ್ಯಂತರ ರೂಪಾಯಿ ನಷ್ಟ

ABOUT THE AUTHOR

...view details