ಕರ್ನಾಟಕ

karnataka

ETV Bharat / state

ಯುಪಿಎಸ್​ಸಿ ಪರೀಕ್ಷೆಯಲ್ಲಿ 446ನೇ ರ‍್ಯಾಂಕ್​ ಪಡೆದ ‌ಜಮಖಂಡಿ ಯುವಕ..

ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಇರುವ ಯುವಕ 446ನೇ ರ‍್ಯಾಂಕ್​ ಪಡೆದು ಸಾಧನೆ ಮಾಡಿದ್ದು, ಕನ್ನಡದ ಬಗ್ಗೆ ಅಭಿಮಾನ‌ ಮೂಡಿಸಿದ್ದಾನೆ..

UPSC examination
ಯುಪಿಎಸ್​ಸಿ ಪರೀಕ್ಷೆಯಲ್ಲಿ 446 ರ‍್ಯಾಂಕ್​ ಪಡೆದ ‌ಜಮಖಂಡಿ ಯುವಕ

By

Published : Aug 4, 2020, 8:31 PM IST

ಬಾಗಲಕೋಟೆ :ಯುಪಿಎಸ್ ಪರೀಕ್ಷೆಯಲ್ಲಿ ಜಿಲ್ಲೆಯ ‌ಜಮಖಂಡಿ ಪಟ್ಟಣದ ಆನಂದ‌ ವೀರೇಶ ಕಲಾದಗಿ ಎಂಬ ಯುವಕ 446ನೇ ರ‍್ಯಾಂಕ್​ ಪಡೆದು ಸಾಧನೆ ಮಾಡಿದ್ದಾರೆ.

ಯುಪಿಎಸ್​ಸಿ ಪರೀಕ್ಷೆಯಲ್ಲಿ 446ನೇ ರ‍್ಯಾಂಕ್​ ಪಡೆದ ‌ಜಮಖಂಡಿ ಯುವಕ

ಆನಂದ‌ ವೀರೇಶ್ ಕಲಾದಗಿ ಪ್ರಾಥಮಿಕ ಹಾಗೂ ಪೌಢ ಶಿಕ್ಷಣವನ್ನು ಜಮಖಂಡಿ ಪಟ್ಟಣದಲ್ಲಿಯೇ ಅಧ್ಯಯನ ಮಾಡಿದ್ದಾರೆ. ನಂತರ ಬೆಳೆಗಾವಿಯಲ್ಲಿ ಬಿಟೆಕ್ ಕಲಿತು, ದೆಹಲಿಯಲ್ಲಿ ಐಎಎಸ್‌ ಕೋಚಿಂಗ್ ಪಡೆದುಕೊಂಡಿದ್ದಾರೆ. ಆದರೆ, ಕನ್ನಡ ಸಾಹಿತ್ಯವನ್ನ ಐಶ್ಚಿಕ ವಿಷಯವನ್ನಾಗಿ ತೆಗೆದುಕೊಂಡು ಪರೀಕ್ಷೆ ತೇರ್ಗಡೆಯಾಗಿರೋದು ವಿಶೇಷ. ಮೈಸೂರಿನ ಡಾ.ಶಿವಕುಮಾರ್ ಎಂಬುವರ ಮಾರ್ಗದರ್ಶನದಿಂದಲೇ ಕನ್ನಡ ಸಾಹಿತ್ಯ ವಿಷಯ ಆಯ್ದುಕೊಂಡಿದ್ದರಂತೆ. ಐಎಎಸ್​ ಪಾಸ್‌ ಆಗಲು ಅವರಿಂದಲೇ ಪ್ರೇರಣೆಯೂದೂರಕಿದೆ ಅಂತಾರೆ ಆನಂದ್‌.

ಇವರ ತಂದೆ ವೀರೇಶ್ ಕಲಾದಗಿ ಹಾಗೂ ತಾಯಿ ಸಾವಿತ್ರಬಾಯಿ ಅನಕ್ಷರಸ್ಥರಾಗಿದ್ದಾರೆ. ಓರ್ವ ಪುತ್ರ ಇಬ್ಬರು‌ ಪುತ್ರಿಯರನ್ನ ಹೊಂದಿರುವ‌ ಈ ಕುಟುಂಬದವರು ವಂಶ ಪಾರಂಪರೆಯಾಗಿ ಪೆಂಡಾಲ್ ಅಂದರೆ ಶ್ಯಾಮಿಯಾನ್ ಹಾಕುವ ಉದ್ಯೋಗ ಅವಲಂಬಿಸಿಕೊಂಡು‌ ಬಂದಿದ್ದಾರೆ. ತಮ್ಮ ವಿದ್ಯಾಭ್ಯಾಸ‌ ಕಡಿಮೆ ಇದ್ದರೂ, ಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ.

ಜೀವನದಲ್ಲಿ ಸಾಧಿಸಬೇಕೆಂಬ ಛಲವಿದ್ದರೆ, ಸಾಧನೆ ಮಾಡಬಹುದು. ಹೀಗಾಗಿ ಯುವಕರು ದುಶ್ಚಟಕ್ಕೆ ‌ಬಲಿ ಆಗಬೇಡಿ. ಸಾಧನೆ ಮಾಡಿ ತೋರಿಸಿರಿ ಅಂತಾರೆ ಆನಂದ‌್. ತಮ್ಮ ಪುತ್ರ ಇಂತಹ ಸಾಧನೆ ಮಾಡಿರುವುದಕ್ಕೆ ಪಾಲಕರಿಗೆ ಸಂತಸ ಉಂಟಾಗಿದ್ದು, ಉನ್ನತ ಸ್ಥಾನ ಏರಿ ತನ್ನ ಗುರಿ ಮುಟ್ಟುತ್ತಾನೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details