ಕರ್ನಾಟಕ

karnataka

ETV Bharat / state

ಬಾಗಲಕೋಟೆ ಜಿಲ್ಲೆಯಲ್ಲಿ ಮಾದರಿ ಕೆರೆ ನಿರ್ಮಾಣ.. ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಶ್ಲಾಘನೆ - ಬಿಲ್ ಕೆರೂರು ಗ್ರಾಮದಲ್ಲಿ ಮಾದರಿ ಕೆರೆ

ಬಾಗಲಕೋಟೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಿಲ್ ಕೆರೂರು ಗ್ರಾಮದಲ್ಲಿ ಪ್ರಧಾನಮಂತ್ರಿ ಅಮೃತ ಸರೋವರ ಯೋಜನೆ ಅಡಿ ಕೆರೆ ನಿರ್ಮಾಣ ಮಾಡಲಾಗಿದೆ.

ಪ್ರಧಾನ ಮಂತ್ರಿ ಅಮೃತ ಸರೋವರ ಯೋಜನೆ ಅಡಿ ಕೆರೆ
ಪ್ರಧಾನ ಮಂತ್ರಿ ಅಮೃತ ಸರೋವರ ಯೋಜನೆ ಅಡಿ ಕೆರೆ

By

Published : Aug 28, 2022, 4:30 PM IST

Updated : Aug 28, 2022, 7:03 PM IST

ಬಾಗಲಕೋಟೆ: ಕೇಂದ್ರ ಸರ್ಕಾರದ ಅಮೃತ ಸರೋವರ ಯೋಜನೆ ಅಡಿಯಲ್ಲಿ ಬಾಗಲಕೋಟೆ ಜಿಲ್ಲೆಯ ಬಿಲ್ ಕೆರೂರು ಗ್ರಾಮದಲ್ಲಿ ಆಕರ್ಷಕವಾಗಿ ಕೆರೆ ನಿರ್ಮಾಣ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿರುವ ಈ ಕೆರೆಯು ರಾಜ್ಯದಲ್ಲಿಯೇ ಮಾದರಿಯಾಗಿದೆ. ಅಂತೆಯೇ ಕೆರೆಯ ಬಗ್ಗೆ ಭಾನುವಾರದ ಮನ್ ಕೀ ಬಾತ್​ನಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಿಲ್ ಕೆರೂರು ಗ್ರಾಮದಲ್ಲಿ ಪ್ರಧಾನಿ ಮಂತ್ರಿ ಅಮೃತ ಸರೋವರ ಯೋಜನೆ ಅಡಿ ಕೆರೆ ನಿರ್ಮಾಣ ಮಾಡಲಾಗಿದೆ. ಸುಮಾರು 28 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಈ ಕೆರೆಯು ಇಡೀ ರಾಜ್ಯ ಹಾಗೂ ದೇಶದಲ್ಲಿಯೇ ಆಕರ್ಷಣೆಯ ಕೇಂದ್ರವಾಗಿದೆ.

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಮಗಾರಿಯನ್ನು ಮಾಡಿಸಿಕೊಂಡು ಈ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಮೊದಲು ಈ ಸ್ಥಳದಲ್ಲಿ ನೀರು ಸಂಗ್ರಹವಾಗಿ ಕೆಸರುಮಯವಾಗಿತ್ತು. ಈ ಹಿನ್ನೆಲೆ ಗ್ರಾಮ ಪಂಚಾಯತ್ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಪ್ರಧಾನ ಮಂತ್ರಿ ಅವರ ಆಶಯದಂತೆ ಕೆರೆ ನಿರ್ಮಿಸಲಾಗಿದೆ.

ಶಾಸಕರಾದ ಡಾ ವೀರಣ್ಣ ಚರಂತಿಮಠ ಅವರು ಮಾತನಾಡಿದರು

ನೀರು ನಿಲ್ಲುವುದಕ್ಕೆ ಸುಮಾರು 6 ರಿಂದ 7 ಅಡಿ ಉದ್ದ ಹಾಗೂ ಸುಮಾರು 100 ಅಡಿಗೂ ಅಗಲವಾಗಿ ಅಗೆಯುವ ಕಾರ್ಯವನ್ನು ಉದ್ಯೋಗ ಖಾತ್ರಿ ಯೋಜನೆ ಅಡಿ ಮಾಡಿಸಲಾಗಿದೆ. ಇದರ ಜೊತೆಗೆ ಕರೆಯ ಸುತ್ತಲೂ ಕಲ್ಲಿನಿಂದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ನಂತರ ಸುತ್ತಲೂ ಕಬ್ಬಿಣದ ಕಾಂಪೌಂಡ್​ ನಿರ್ಮಾಣ ಮಾಡಲಾಗಿದ್ದು, ಸುಂದರವಾಗಿ ಕೆರೆ ಕಂಗೊಳಿಸುತ್ತಿದೆ.

ಮೂರು ಕೆರೆ ನಿರ್ಮಾಣ: ಮಳೆ ಬಂದಾಗ ಬೆಟ್ಟದಿಂದ ನೀರು ಬಂದು ಈ ಕೆರೆಗೆ ಸಂಗ್ರಹವಾಗುತ್ತದೆ. ಇದೇ ನೀರು ಜಾನುವಾರುಗಳಿಗೆ ಹಾಗೂ ಅಕ್ಕಪಕ್ಕದ ಜಮೀನುಗಳಿಗೆ ಬಳಕೆ ಆಗುತ್ತಿದ್ದು, ಸ್ಥಳೀಯ ರೈತರಿಗೆ ಅನುಕೂಲವಾಗುತ್ತಿದೆ‌. ಈ ಕೆರೆಯಿಂದ ಅಂತರ್​ಜಲ ಮಟ್ಟ ಹೆಚ್ಚಾಗುತ್ತಿದ್ದು, ಸ್ಥಳೀಯರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ‌. ಪ್ರಧಾನಿಮಂತ್ರಿ ಅಮೃತ ಯೋಜನೆ ಅಡಿ, ಬಾಗಲಕೋಟೆ ತಾಲೂಕಿನಲ್ಲಿ ಮೂರು ಕೆರೆ ನಿರ್ಮಾಣವಾಗಿದೆ. ತುಳಸಿಗಿರಿಯಲ್ಲಿ ಎರಡು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಬಾಗಲಕೋಟೆ ಮತಕ್ಷೇತ್ರದದಲ್ಲಿ ಸಾಕಷ್ಟು ಕೆರೆ ಅಭಿವೃದ್ಧಿ ನಿರ್ಮಾಣ ಮಾಡಲಾಗಿದೆ ಎಂದು ಸ್ಥಳೀಯ ಶಾಸಕರಾದ ವೀರಣ್ಣ ಚರಂತಿಮಠ ತಿಳಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಮೊದಲು 20 ಲಕ್ಷ ರೂಪಾಯಿಗಳ ಅನುದಾನ ನಂತರ 8 ಲಕ್ಷ ರೂಪಾಯಿಗಳಿಂದ ಸುತ್ತಲೂ ಕಾಂಪೌಂಡ್​ ಹಾಗೂ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಲ್ಮೇಶಗೌಡ ಗೌಡರ್​ ಅವರು ತಿಳಿಸಿದ್ದಾರೆ.

ಗ್ರಾಮಸ್ಥರಿಂದ ಕೆರೆ ಅಭಿವೃದ್ಧಿ: ಕೆರೆಯ ಪಕ್ಕದಲ್ಲೇ ಭಾವಿ ಇದ್ದು, ಕೆರೆಯಿಂದ ಇದರಲ್ಲಿಯೂ ಸಹ ಜಲಮಟ್ಟ ಹೆಚ್ಚಾಗಿದೆ‌. ಇದರಿಂದ ಇಡೀ ಪ್ರದೇಶ ಸುಂದರ ವನದಂತೆ ಕಾಣುತ್ತಿದೆ ಎಂದು ಸ್ಥಳೀಯರಾದ ಬಿ. ಎಲ್ ಪಾಟೀಲ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಗ್ರಾಮಸ್ಥರು ಸೇರಿಕೊಂಡು ಕೆರೆ ಅಭಿವೃದ್ಧಿ ಮಾಡಿರುವುದು ಶ್ಲಾಘನೀಯವಾಗಿದೆ‌.

ಬಾಗಲಕೋಟೆ ಕೆರೆಯ ಬಗ್ಗೆ ಮೋದಿ ಮೆಚ್ಚುಗೆ: ಅಮೃತ ಮಹೋತ್ಸವ ಸ್ವಾತಂತ್ರ್ಯೋತ್ಸವ ದಿನದಂದು ಸ್ಥಳೀಯ ಶಾಸಕರಾದ ವೀರಣ್ಣ ಚರಂತಿಮಠ ಹಾಗೂ ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಇತರ ಗಣ್ಯರು ಈ ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಲೋಕಾರ್ಪಣೆ ಮಾಡಲಾಗಿದೆ. ಇಂತಹ ಕೆರೆಯು ಇಡೀ ರಾಜ್ಯದಲ್ಲಿ ಮಾದರಿಯಾಗಿದ್ದರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್​ನಲ್ಲಿ ಬಿಲ್ ಕೆರೂರು ಗ್ರಾಮದಲ್ಲಿ ಅಭಿವೃದ್ದಿ ಮಾಡಿರುವ ಈ ಕೆರೆಯನ್ನು ಪ್ರಸ್ತಾವನೆ ಮಾಡಿ, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕಾರ್ಯ ಶ್ಲಾಘಿಸಿದ್ದಾರೆ.

ಓದಿ:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬದಲಾವಣೆ ಚರ್ಚೆ ನಡೆದಿಲ್ಲ: ಸಿಎಂ ಸ್ಪಷ್ಟನೆ

Last Updated : Aug 28, 2022, 7:03 PM IST

ABOUT THE AUTHOR

...view details