ಬಾಗಲಕೋಟೆ: ಶಕ್ತಿಪೀಠ ಐತಿಹಾಸಿಕ ಬಾದಾಮಿಯ ಬನಶಂಕರಿ ದೇವಾಲಯಕ್ಕೆ ಪತ್ನಿ ಜೊತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದುಕೊಂಡರು.
ಬನಶಂಕರಿ ಆಶೀರ್ವಾದ ಪಡೆದ ಕೆ.ಎಸ್.ಈಶ್ವರಪ್ಪ ದಂಪತಿ - ಬಾಗಲಕೋಟೆ ನ್ಯೂಸ್
ನೂತನ ಸಂಪುಟದಲ್ಲಿ ಯೋಗ್ಯವಾದ ಸ್ಥಾನಮಾನ ಸಿಗುವಂತೆ ಬನಶಂಕರಿ ದೇವಿಗೆ ಕೆ.ಎಸ್.ಈಶ್ವರಪ್ಪ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿದ ಕೆ.ಎಸ್.ಈಶ್ವರಪ್ಪ
ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆಯಲ್ಲಿರುವ ಈಶ್ವರಪ್ಪನವರು ಇಂದು ವಿಜಯಪುರ ಪ್ರವಾಸ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಿಯ ದರ್ಶನ ಪಡೆದು ನಂತರ ಬಾಗಲಕೋಟೆ ಮಾರ್ಗವಾಗಿ ವಿಜಯಪುರ ಜಿಲ್ಲೆಗೆ ತೆರಳಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ನೂತನ ಸಂಪುಟದಲ್ಲಿ ಯೋಗ್ಯ ಸ್ಥಾನಮಾನ ಸಿಗುವಂತೆ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.