ಬಾಗಲಕೋಟೆ:cಉನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರಿಗೆ ವಿವಿಧ ಆಮಿಷಗಳನ್ನೊಡ್ಡಿ ಸೆಳೆಯುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಇದೀಗಲಕ್ಷಾಂತರ ಮೌಲ್ಯದ ಇಸ್ತ್ರಿ ಪೆಟ್ಟಿಗೆಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನವನ್ನು ಬಾಗಲಕೋಟೆ ಎಸ್.ಪಿ ಜಯಪ್ರಕಾಶ್ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದೆ. ನಗರದ ಹೊರವಲಯದ ಮಹಾರುದ್ರಪ್ಪನ ಹಳ್ಳದ ಬಳಿ ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ನಾಯಕರಿಗೆ ಸೇರಿದ ಇಸ್ತ್ರಿ ಪೆಟ್ಟಿಗೆಗಳು ಇರಬಹುದೆಂಬ ಶಂಕೆ ಬಂದ ಹಿನ್ನೆಲೆ ಕ್ಯಾಂಟರ್ ವಾಹನ ಮೇಲೆ ಬಾಗಲಕೋಟೆ ನಗರದ ಪೊಲೀಸರು ದಾಳಿ ಮಾಡಿದ್ದು, 6798 ಇಸ್ತ್ರಿ ಪೆಟ್ಟಿಗೆಗಳನ್ನು ಜಪ್ತಿ ಮಾಡಿದ್ದಾರೆ.
6798 ಇಸ್ತ್ರಿ ಪೆಟ್ಟಿಗೆ ಜಪ್ತಿ: ಈ ವೇಳೆ ಕ್ಯಾಂಟರ್ ವಾಹನ ಪರಿಶೀಲಿಸಿದ ಪೊಲೀಸರು, ಅಂದಾಜು 60 ಲಕ್ಷ ಮೌಲ್ಯದ 6798 ಇಸ್ತ್ರಿ ಪೆಟ್ಟಿಗೆಗಳು ಇರುವುದು ಪತ್ತೆಯಾಗಿವೆ. ವಾಹನದ ಚಾಲಕನ ಬಳಿ ಸಮರ್ಪಕ ಬಿಲ್ ಇಲ್ಲದಿರುವ ಮಾಹಿತಿ ಬಂದಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ರಾಜಕೀಯ ನಾಯಕರ ಮೇಲೆ ಶಂಕೆ: ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ನಾಯಕರಿಗೆ ಸೇರಿದ ಇಸ್ತ್ರಿ ಪೆಟ್ಟಿಗೆಗಳು ಇರಬಹುದೆಂಬ ಸಂಶಯ ಹಿನ್ನೆಲೆ ಪೊಲೀಸರು ದಾಳಿ ಮಾಡಿರುವುದು ಬೆಳಕಿಗೆ ಬಂದಿದೆ. ಮತದಾರರಿಗೆ ಆಮಿಷ ಒಡ್ಡಲು ಇಸ್ತ್ರಿ ಪೆಟ್ಟಿಗಳನ್ನು ಹಂಚಲಾಗುತ್ತಿದೆ ಎಂಬ ಆರೋಪವೂ ಇತ್ತು. ಈ ಹಿನ್ನೆಲೆ ಕ್ಯಾಂಟರ್ ವಾಹನ ವಾಹನ ಚಾಲಕನನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ರು ತನಿಖೆ ನಡೆಸಿದ್ದಾರೆ.
ಬೀಳಗಿ ಮತಕ್ಷೇತ್ರದಲ್ಲಿ ಇಸ್ತ್ರಿ ಪೆಟ್ಟಿಗೆ ಹಂಚಿಕೆ ಮಾಡಿರುವ ಬಗ್ಗೆ ಸಹ ಆರೋಪಗಳು ಕೇಳಿ ಬಂದಿದ್ದವು. ಪಕ್ಷವೊಂದರ ಕಾರ್ಯಕರ್ತರು ಮನೆ ಮನೆಗೆ ತೆರಳಿ ಹಂಚುತ್ತಿದ್ದ ವೇಳೆ ರೈತರು ತಡೆಯೊಡ್ಡಿದ್ದರು. ಈ ಇಸ್ತ್ರಿ ಪೆಟ್ಟಿಗೆಗಳನ್ನು ಬೀಳಗಿ ಮತಕ್ಷೇತ್ರಕ್ಕೆ ಸಾಗಿಸುತ್ತಿರುವ ಬಗ್ಗೆ ವಿವಿಧ ಮೂಲಗಳಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.