ಕರ್ನಾಟಕ

karnataka

By

Published : Jul 22, 2021, 8:51 PM IST

ETV Bharat / state

ಪ್ರಕೃತಿ ಮಡಿಲಿನಲ್ಲಿ ಕಂಗೊಳಿಸುತ್ತಿದ್ದಾಳೆ 'ಹುಲಿಗೆಮ್ಮ': ಪ್ರವಾಸಿಗರಿಗಿದು ರಮ್ಯ ತಾಣ..

ಹುಲಿಗೆಮ್ಮ ಫಾಲ್ಸ್​ ಪ್ರಕೃತಿಯ ಮಡಿಲಿನಲ್ಲಿ ಕಂಗೊಳಿಸುತ್ತಿದೆ. ಸುಮಾರು ನೂರು ಅಡಿ ಬೆಟ್ಟದ ಮೇಲಿಂದ ನೀರು ಬೀಳುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ.

huligamma-falls-attracts-tourists-in-bagalakote
ಹುಲಿಗೆಮ್ಮ ಫಾಲ್ಸ್​

ಬಾಗಲಕೋಟೆ:ಜಿಲ್ಲೆಯಲ್ಲಿಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಪರಿಣಾಮ ಇಲ್ಲಿನ ವಿವಿಧ ಪ್ರದೇಶಗಳಲ್ಲಿ ಬೆಟ್ಟದ ಮೇಲಿಂದ ನೀರು ಧುಮ್ಮಿಕ್ಕುತ್ತಿದೆ. ಇದರಿಂದ ಪ್ರವಾಸಿಗರು ಆಕರ್ಷಿತರಾಗಿದ್ದಾರೆ.

ಹುಲಿಗೆಮ್ಮ ಫಾಲ್ಸ್​ನ ಸೌಂದರ್ಯವನ್ನು ಪ್ರವಾಸಿಗರು ಆನಂದಿಸುತ್ತಿರುವ ದೃಶ್ಯ

ಬಾದಾಮಿ ತಾಲೂಕಿನ ಹುಲಿಗೆಮ್ಮ ಕೊಳದಲ್ಲಿ ನೀರು ಬೀಳುತ್ತಿರುವುದು ಪ್ರವಾಸಿಗರ ಗಮನ ಸೆಳೆಯುತ್ತಿದೆ. ಚಾಲುಕ್ಯರ ಕಾಲದ ಖಜಾನೆ ಹಾಗೂ ಸಮಾಧಿಗಳು ಇರುವ ಪ್ರದೇಶವೆಂಬ ಇತಿಹಾಸವಿರುವ ಪ್ರದೇಶದಲ್ಲಿ ಪ್ರಸಿದ್ದ ಹುಲಿಗೆಮ್ಮ ದೇವಾಲಯವೂ ಇದೆ. ಹಿಂದಿನ ಕಾಲದಲ್ಲಿ ಸಾಧು-ಸಂತರು ಇಲ್ಲಿ ತಪಸ್ಸು ಮಾಡುತ್ತಿದ್ದರು ಎನ್ನುವುದು ಐತಿಹ್ಯ.

ಇನ್ನು ಹುಲಿಗೆಮ್ಮ ಫಾಲ್ಸ್​ ಪ್ರಕೃತಿಯ ಸೌಂದರ್ಯದ ಮಧ್ಯೆ ಕಂಗೊಳಿಸುತ್ತಿದೆ. ಸುಮಾರು ನೂರು ಅಡಿ ಬೆಟ್ಟದ ಮೇಲಿಂದ ನೀರು ಬೀಳುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಕೊರೊನಾದಲ್ಲಿ ಮನೆಯಲ್ಲಿ ಕುಳಿತು ಬೇಜಾರಾಗಿದ್ದ ಜನತೆ ಇಂತಹ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದಾರೆ. ಯುವಕರು, ಮಹಿಳೆಯರು, ಮಕ್ಕಳು ಹೀಗೆ ವಿವಿಧ ವಯೋಮಾನದವರು ಸೇರಿಕೊಂಡು ಆಗಮಿಸಿ ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ:ಮಠಾಧೀಶರ ಭಾವನೆಗಳಿಗೆ ಬಿಜೆಪಿಗರೇ ಪ್ರತಿಕ್ರಿಯೆ ನೀಡಬೇಕು: ಹೆಚ್​​.ಡಿ.ಕುಮಾರಸ್ವಾಮಿ

ABOUT THE AUTHOR

...view details