ಬಾಗಲಕೋಟೆ : ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಐತಿಹಾಸಿಕ ಸ್ಥಳ ಬಾದಾಮಿಯ ಅಕ್ಕತಂಗಿಯರ ಫಾಲ್ಸ್ ನಲ್ಲಿ ನೀರು ಮೈದುಂಬಿ ಹರಿಯುತ್ತಿದ್ದು,ಸ್ಥಳೀಯರನ್ನು ,ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಬಾದಾಮಿಯಲ್ಲಿ ಭಾರೀ ಮಳೆ: ಅಕ್ಕತಂಗಿ ಫಾಲ್ಸ್ ನೋಡಲು ಪ್ರವಾಸಿಗರ ದಂಡು - kannadanews
ಮಳೆ ಹಿನ್ನೆಲೆ ಐತಿಹಾಸಿಕ ಸ್ಥಳ ಬಾದಾಮಿಯ ಅಕ್ಕತಂಗಿಯರ ಫಾಲ್ಸ್ ನಲ್ಲಿ ನೀರಿನ ಹರಿವು ಹೆಚ್ಚಾಗಿದ್ದು,ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.
ಬಾದಾಮಿಯಲ್ಲಿ ಭಾರೀ ಮಳೆ
ಕಳೆದ ಮೂರು ವರ್ಷದಿಂದ ಈ ಫಾಲ್ಸ್ ನಲ್ಲಿ ನೀರು ಬೀಳದೆ,ಅಗಸ್ತ್ಯ ತೀರ್ಥ ಹೊಂಡವು ಸಂಪೂರ್ಣ ಬತ್ತಿ ಹೋಗಿತ್ತು.ಈಗ ಜೋರಾಗಿ ಮಳೆ ಬಂದ ಹಿನ್ನೆಲೆಯಲ್ಲಿ ಬೆಟ್ಟದ ಮೇಲಿಂದ ಫಾಲ್ಸ್ ಮೂಲಕ ನೀರು ಹರಿಯುತ್ತಿದ್ದು,ಭಾರಿ ಪ್ರಮಾಣದಲ್ಲಿ ನೀರು ಅಗಸ್ತ್ಯ ತೀರ್ಥ ಹೊಂಡಕ್ಕೆ ಸೇರುತ್ತಿದೆ.ಇದನ್ನು ನೋಡಲು ಜನ ಮುಗಿದು ಮುಗಿ ಬೀಳುತ್ತಿದ್ದಾರೆ.ಭೂತನಾಥ ದೇವಾಲಯ ಮುಂದೆ ಕೂಡ ನೀರು ಹರಿಯುತ್ತಿದೆ.
ಇನ್ನೂ ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಸಾಕಷ್ಟು ಹಾನಿಯುಂಟಾಗಿದೆ. ಬಾಗಲಕೋಟೆ ಸಮೀಪ ಸೀಮೆಕೇರಿ ಗ್ರಾಮದಲ್ಲಿ ಮಳೆ ನೀರು ಮನೆಗೆ ನುಗ್ಗಿ ತೊಂದರೆ ಉಂಟಾಗಿದೆ.