ಬಾಗಲಕೋಟೆ:ನಗರದ ಸಮೀಪದ ಕಿರೆಸೂರು ಎಂಬಲ್ಲಿ ಮಳೆಯಿಂದಾಗಿ ಮನೆ ಕುಸಿದು ಬಿದ್ದು, ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಹಡಪದ ಕುಟುಂಬದವರಿಗೆ ಶಾಸಕ ವೀರಣ್ಣ ಚರಂತಿಮಠ ಪರಿಹಾರ ಧನ ವಿತರಣೆ ಮಾಡಿದರು.
ಬಾಗಲಕೋಟೆಯ ಹಡಪದ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡಿದ ಸರ್ಕಾರ - bagalakote flood latest news
ಅಕ್ಟೋಬರ್ 6 ರಂದು ಸತತ ಸುರಿದ ಮಳೆಯಿಂದಾಗಿ ಮನೆ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ನಡೆದಿತ್ತು. ಈ ದುರಂತಕ್ಕೆ ಸ್ಪಂದಿಸಿರುವ ಸರ್ಕಾರ 15 ಲಕ್ಷ ಬಿಡುಗಡೆ ಮಾಡಿದೆ.
ಹಡಪದ ಕುಟುಂಬಕ್ಕೆ ಶಾಸಕ ವೀರಣ್ಣ ಚರಂತಿಮಠ ಪರಿಹಾರ ಚೆಕ್ ವಿತರಿಸಿದರು.
ಅಕ್ಟೋಬರ್ 6ರಂದು ಮನೆ ಕುಸಿದು ಬಿದ್ದ ಪರಿಣಾಮ ಹಡಪದ ಕುಟುಂಬದ ಮೂವರು ಮೃತಪಟ್ಟಿದ್ದರು. ಶಾಸಕ ವೀರಣ್ಣ ಚರಂತಿಮಠ ಅವರು ತಲಾ ಐದು ಲಕ್ಷದಂತೆ ಒಟ್ಟು 15 ಲಕ್ಷ ರೂಪಾಯಿ ಪರಿಹಾರ ಧನ ಹಾಗೂ ಅಂತ್ಯ ಸಂಸ್ಕಾರಕ್ಕೆ ತಲಾ 15 ಸಾವಿರ ರೂಪಾಯಿಯ ಚೆಕ್ಗಳನ್ನು ನೀಡಿದರು. ಈ ಸಮಯದಲ್ಲಿ ತಹಶೀಲ್ದಾರ್ ಎಂ.ಬಿ.ನಾಗಠಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
Last Updated : Oct 16, 2019, 10:40 AM IST