ಬಾಗಲಕೋಟೆ: ಅಗ್ನಿಪಥ್ ಯೋಜನೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಷ್ಟವಾಗಿ ಹೇಳಿದೆ, ಇದರಿಂದ ಅನ್ಯಾಯಗುವಂತಹ ಪ್ರಶ್ನೆಯೇ ಇಲ್ಲ. ಬದಲಾಗಿ ಅನುಕೂಲವಾಗಲಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲೆಯ ಗಲಗಲಿ ಗ್ರಾಮದಲ್ಲಿ ಮಾತನಾಡಿದ ಅವರು, 4 ವರ್ಷ ದೇಶ ಸೇವೆ ಮಾಡಿ ಬಂದರೂ ಸರ್ಕಾರಿ ನೌಕರಿಯಲ್ಲಿ ಅವಕಾಶ ಸಿಗಲಿದೆ. ಜನರು ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿಕೊಂಡರು. ತಮಗೆ ಏನಾದ್ರೂ ಆತಂಕಗಳಿದ್ದರೆ, ನ್ಯಾಯಯುತ ಬೇಡಿಕೆ ಇದ್ದರೆ ಶಾಂತ ರೀತಿಯಿಂದ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕು. ಇದರಲ್ಲಿ ರಾಜಕೀಯ ಕೈವಾಡ ಇದೆ ಅಂತ ಕಣ್ಣಿಗೆ ಕಾಣಿಸುತ್ತಿದೆ. ರಾಜ್ಯ ಮತ್ತು ದೇಶದಲ್ಲಿ ಈ ಹಿಂಸಾಚಾರದ ಹಿಂದೆ ಯಾರಿದ್ದಾರೆಂದು ಗೊತ್ತಿದೆ. ಈ ಬಗ್ಗೆ ತನಿಖೆಯಾಗಲಿದೆ ಎಂದು ಹೇಳಿದರು.