ಕರ್ನಾಟಕ

karnataka

ETV Bharat / state

ತುಂಬಿ ಹರಿಯುತ್ತಿರುವ ಘಟಪ್ರಭಾ... ಬಸವೇಶ್ವರ ದೇವಾಲಯ ಜಲಾವೃತ - temple immersed from heavy rain

ಭಕ್ತರು ದೇವಸ್ಥಾನದ ಒಳಗೆ ಹೋಗಿ ಪೂಜೆ, ಪುನಸ್ಕಾರ ಮಾಡಲಿಕ್ಕೆ ಸಾಧ್ಯವಾಗುತಿಲ್ಲ. ಶ್ರಾವಣ ಮಾಸವಾದ್ದರಿಂದ ಈ ದೇವಸ್ಥಾನಕ್ಕೆ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದು, ದೇವಾಲಯ ಜಲಾವೃತವಾಗಿರುವುದರಿಂದ ಭಕ್ತರು ದೂರದಿಂದಲೇ ನಿಂತು ನಮಸ್ಕರಿಸುತ್ತಿದ್ದಾರೆ.

ಜಲಾವೃತಗೊಂಡ ದೇವಾಲಯ

By

Published : Aug 2, 2019, 5:29 PM IST

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಆಗುತ್ತಿರುವ ಪರಿಣಾಮ ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಮಾಚಕನೂರು ಗ್ರಾಮದ ಬಸವೇಶ್ವರ ದೇವಸ್ಥಾನ ನೀರಿನಲ್ಲಿ ಜಲಾವೃತಗೊಂಡಿದೆ.

ಇದರಿಂದ ಭಕ್ತರು ದೇವಸ್ಥಾನದ ಒಳಗೆ ಹೋಗಿ ಪೂಜೆ, ಪುನಸ್ಕಾರ ಮಾಡಲಿಕ್ಕೆ ಸಾಧ್ಯವಾಗುತಿಲ್ಲ. ಶ್ರಾವಣ ಮಾಸವಾದ್ದರಿಂದ ಈ ದೇವಸ್ಥಾನಕ್ಕೆ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದು, ಪೂಜೆಗೆ ಪರದಾಡುವಂತಾಗಿದೆ.

ತುಂಬಿ ಹರಿಯುತ್ತಿರುವ ಘಟಪ್ರಭಾ

ಮಹಾರಾಷ್ಟ್ರ ರಾಜ್ಯದಲ್ಲಿನ ಮಳೆಯಿಂದಾಗಿ ಕೃಷ್ಣಾ ನದಿಗೆ 2 ಲಕ್ಷ 15 ಸಾವಿರ ಕ್ಯೂಸೆಕ್​​ ನೀರು ಬಿಡುತ್ತಿರುವ ಪರಿಣಾಮ ಜಮಖಂಡಿ ತಾಲೂಕಿನ ಕಂಕಣವಾಡಿ, ಮುತ್ತೂರು, ಮೈಗೂರ, ತುಬಚಿ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಮೂಲಕ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.

ABOUT THE AUTHOR

...view details