ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ 4 ಮಂದಿ ಡಿಸ್ಚಾರ್ಜ್​​... ಚಪ್ಪಾಳೆ ತಟ್ಟಿ ಬೀಳ್ಕೊಟ್ಟ ವೈದ್ಯಕೀಯ ಸಿಬ್ಬಂದಿ - corona discharge news

ಬಾಗಲಕೋಟೆಯ ಇಬ್ಬರು, ಜಮಖಂಡಿ ಮತ್ತು ಮುಧೋಳದ ತಲಾ ಒಬ್ಬರು ಸೇರಿ ನಾಲ್ವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಇವರಿಗೆ ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

four-corona-patient-discharge
ಬಾಗಲಕೋಟೆಯಲ್ಲಿ ನಾಲ್ಕು ಮಂದಿ ಡಿಸ್ಚಾರ್ಜ್

By

Published : May 18, 2020, 5:10 PM IST

ಬಾಗಲಕೋಟೆ:ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಇಂದು 4 ಜನ ಗುಣಮುಖರಾಗಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಬಾಗಲಕೋಟೆಯ ಇಬ್ಬರು, ಜಮಖಂಡಿ ಮತ್ತು ಮುಧೋಳದ ತಲಾ ಒಬ್ಬರು ಸೇರಿ ನಾಲ್ವರು ಸೋಂಕಿತರು ಗುಣಮುಖರಾಗಿದ್ದಾರೆ. ಇವರಿಗೆ ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

ಇಂದು ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್​ನಲ್ಲಿ ಯಾವುದೇ ಕೊರೊನಾ ಸೋಂಕಿತರು ಕಂಡು ಬಂದಿಲ್ಲ. ಜಿಲ್ಲೆಯಿಂದ ಕಳುಹಿಸಲಾದ 43 ಸ್ಯಾಂಪಲ್​ಗಳ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಮತ್ತೆ 109 ಜನರ ಗಂಟಲು ದ್ರವದ ಮಾದರಿ ಪರೀಕ್ಷೆಗೆ ರವಾನಿಸಲಾಗಿದೆ.

ಬಾಗಲಕೋಟೆಯಲ್ಲಿ ನಾಲ್ಕು ಮಂದಿ ಡಿಸ್ಚಾರ್ಜ್

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 71 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಇನ್ನು 39 ಜನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details