ಬಾಗಲಕೋಟೆ :ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದ ಸಂತಪ್ಪ ಸೀತವ್ವ ಮಾಂಗ ಎನ್ನುವವರ ತೋಟದ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ.
ಮನೆಗೆ ಆಕಸ್ಮಿಕ ಬೆಂಕಿ:ಸಾವಿರಾರು ರೂ. ಮೌಲ್ಯದ ಆಸ್ತಿ ಪಾಸ್ತಿ ಹಾನಿ - kannadanews
ಮನೆಗೆ ಆಕಸ್ಮಿಕ ಬೆಂಕಿ ತಗುಲಿದ್ದು,ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.
ತೋಟದಲ್ಲಿ ನಿರ್ಮಿಸಿದ್ದ ಮನೆಯಲ್ಲಿ ಪತ್ನಿ ಮತ್ತು ಮೂರು ಜನ ಗಂಡು ಮಕ್ಕಳು ಸಮೇತ ವಾಸ ಮಾಡುತ್ತಿದ್ದರು. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಕಸ್ಮಿಕ ಬೆಂಕಿ ತಗುಲಿದೆ.ಇದನ್ನು ಅರಿತ ಸ್ಥಳೀಯರು ಜಾನುವಾರುಗಳನ್ನು ಬೆಂಕಿಯಿಂದ ರಕ್ಷಣೆ ಮಾಡಿದ್ದಾರೆ.ಗುಡಿಸಲಿನಲ್ಲಿದ್ದ ಎರಡು ಚೀಲ ಜೋಳ ಮತ್ತು ಗೃಹ ಉಪಯೋಗ ವಸ್ತುಗಳು ತಾವು ಉಡುವ ಬಟ್ಟೆಗಳು ಸಂಪೂರ್ಣ ಸುಟ್ಟ ಭಸ್ಮವಾಗಿದ್ದು,ರೈತ ಕುಟುಂಬದವರು ಕಂಗಲಾಗಿದ್ದಾರೆ.
ಸ್ಥಳಕ್ಕೆ ಜಮಖಂಡಿಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ, ಬೆಂಕಿ ನಂದಿಸಿದ್ದಾರೆ.ವಾಸಸ್ಥಳ ಸಂಪೂರ್ಣ ಭಸ್ಮವಾಗಿರುದ್ದು, ರೈತ ಕುಟುಂಬದವರು ಬೀದಿ ಪಾಲಾಗಿದ್ದಾರೆ. ಸರ್ಕಾರ ನಮಗೆ ಆರ್ಥಿಕವಾಗಿ ಸಹಾಯ ಮಾಡಬೇಕು ಎಂದು ನಷ್ಟ ಒಳಗಾಗಿರುವ ರೈತ ಕುಟುಂಬದವರು ಒತ್ತಾಯಿಸಿದ್ದಾರೆ.