ಕರ್ನಾಟಕ

karnataka

ETV Bharat / state

ಹಾವು ಕಚ್ಚಿ ರೈತ ಸಾವು: ತಬ್ಬಲಿ ಕುಟುಂಬಕ್ಕೆ ಬೇಕಿದೆ ಸರ್ಕಾರದ ನೆರವು

ಬಾಗಲಕೋಟೆ ತಾಲೂಕಿನ ಮಾಸ್ತಿಹಾಳ ಗ್ರಾಮದ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದ ರೈತನಿಗೆ ಹಾವು ಕಚ್ಚಿದ್ದು, ಚಿಕಿತ್ಸೆ ಫಲಕಾರಿಯಾಗದೆ ರೈತ ಮೃತಪಟ್ಟಿರುವ ಘಟನೆ ನಡೆದಿದೆ.

Farmer death: Family is in need of Government help
ಹಾವು ಕಚ್ಚಿ ರೈತ ಸಾವು: ತಬ್ಬಲಿ ಕುಟುಂಬಕ್ಕೆ ಬೇಕಿದೆ ಸರ್ಕಾರದ ನೆರವು

By

Published : Jun 16, 2020, 12:02 AM IST

ಬಾಗಲಕೋಟೆ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನಿಗೆ ಹಾವು ಕಚ್ಚಿದ್ದು, ಚಿಕಿತ್ಸೆ ಫಲಕಾರಿಯಾಗದೆ ರೈತ ಮೃತಪಟ್ಟಿರುವ ಘಟನೆ ತಾಲೂಕಿನ ಮಾಸ್ತಿಹಾಳ ಗ್ರಾಮದಲ್ಲಿ ಜರುಗಿದೆ.

ಯಲ್ಲಪ್ಪ ಚಂದ್ರಪ್ಪ ಜಾಯಗೊಂಡ(56) ಸಾವನ್ನಪ್ಪಿದ ರೈತ. ಈತ ಕಳೆದ ರಾತ್ರಿ ಜಮೀನಿಗೆ ನೀರು ಹಾಯಿಸುತ್ತಿದ್ದಾಗ ಹಾವು ಕಚ್ಚಿದೆ. ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಮೃತ ರೈತನ ಕುಟುಂಬ ಬಡತನದಲ್ಲಿ ಜೀವನ ಸಾಗಿಸುತ್ತಿದ್ದು, ಮನೆ ಮುಖಂಡನೇ ಇಲ್ಲದೆ ಕುಟುಂಬ ಇನ್ನಷ್ಟು ದುರ್ಬಲವಾಗಿದೆ. ಹೀಗಾಗಿ ಕುಟುಂಬಕ್ಕೆ ಸೂಕ್ತ ಪರಿಹಾರ ಧನ ನೀಡುವಂತೆ ರೈತ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.

ABOUT THE AUTHOR

...view details