ಕರ್ನಾಟಕ

karnataka

By

Published : Dec 11, 2022, 4:56 PM IST

ETV Bharat / state

ರಾಜ್ಯದಲ್ಲಿ ಗುಜರಾತ್​​ ಮಾದರಿ ಚುನಾವಣೆ : ಮಾಜಿ ಸಿಎಂ ಶೆಟ್ಟರ್​ ಹೇಳಿದ್ದೇನು ?

ಬೇರೆ ಬೇರೆ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಸಮೀಕ್ಷೆ ಮಾಡುತ್ತಾರೆ. ಸಮೀಕ್ಷೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲಾಗುತ್ತದೆ. ಇದು ಕೇವಲ ಕರ್ನಾಟಕ ಅಷ್ಟೇ ಅಲ್ಲ, ಎಲ್ಲ ಕಡೆ ಅನ್ವಯ ಆಗುತ್ತದೆ. ಹಿರಿಯ ನಾಯಕರಿಗೆ ಟಿಕೆಟ್​ ನೀಡುವುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯ ಉಸ್ತುವಾರಿಗೆ ಬಿಟ್ಟ ವಿಚಾರ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್​ ಹೇಳಿದ್ದಾರೆ.

Etv ex-cm-jagadish-shettar-reaction-on-gujarat-model-election-in-karnataka
ರಾಜ್ಯದಲ್ಲಿ ಗುಜರಾತ್​​ ಮಾದರಿ ಚುನಾವಣೆ : ಮಾಜಿ ಸಿಎಂ ಶೆಟ್ಟರ್​ ಹೇಳಿದ್ದೇನು ?

ರಾಜ್ಯದಲ್ಲಿ ಗುಜರಾತ್​​ ಮಾದರಿ ಚುನಾವಣೆ : ಮಾಜಿ ಸಿಎಂ ಶೆಟ್ಟರ್​ ಹೇಳಿದ್ದೇನು ?

ಬಾಗಲಕೋಟೆ : ರಾಜ್ಯದಲ್ಲೂ ಗುಜರಾತ್ ಮಾದರಿ ಚುನಾವಣೆ ನಡೆಯಲಿದೆ ಎಂದು ನಿಮಗೆ(ಮಾಧ್ಯಮದವರಿಗೆ) ಯಾರಾದ್ರೂ ಹೇಳಿದ್ದಾರಾ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಪ್ರಶ್ನಿಸಿದ್ದಾರೆ.

ನಗರದಲ್ಲಿ ಬಣಜಿಗ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಆಗಮಿಸಿ ಮಾತನಾಡಿದ ಅವರು, ರಾಜ್ಯದಲ್ಲೂ ಗುಜರಾತ್ ಮಾದರಿ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾರಾದರೂ ಈ ಬಗ್ಗೆ ಹೇಳಿದ್ದಾರಾ?. ಪ್ರತಿಯೊಂದು ಹಂತದಲ್ಲೂ ಒಂದೊಂದು ಪ್ರಯೋಗ ನಡೆಯುತ್ತದೆ. ಗುಜರಾತ್ ನಲ್ಲಿ ಸ್ಥಳೀಯ ವ್ಯವಸ್ಥೆ ಹಿನ್ನೆಲೆಯಲ್ಲಿ ಆ ರೀತಿ ಚುನಾವಣೆ ನಡೆಸಲಾಗಿದೆ. ಅಲ್ಲಿ ಮೋದಿ ಮತ್ತು ಅಮಿತ್ ಶಾಗೆ ಎಲ್ಲವೂ ಗೊತ್ತಿದೆ ಎಂದು ಹೇಳಿದರು.

ಬೇರೆ ಬೇರೆ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಸಮೀಕ್ಷೆ ಮಾಡುತ್ತಾರೆ. ಸಮೀಕ್ಷೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲಾಗುತ್ತದೆ. ಇದು ಕೇವಲ ಕರ್ನಾಟಕ ಅಷ್ಟೇ ಅಲ್ಲ, ಎಲ್ಲ ಕಡೆ ಅನ್ವಯ ಆಗುತ್ತದೆ. ಹಿರಿಯ ನಾಯಕರಿಗೆ ಟಿಕೆಟ್​ ನೀಡುವುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯ ಉಸ್ತುವಾರಿಗೆ ಬಿಟ್ಟ ವಿಚಾರವಾಗಿದೆ ಎಂದರು.

ಚುನಾವಣೆಗೆ ಹಿಂದುತ್ವ ಮತ್ತೊಂದು ಅನ್ನುವ ಪ್ರಶ್ನೆ ಇಲ್ಲ. ಮೋದಿಯವರು ಧಾರ್ಮಿಕ ನಡುವಳಿಕೆಯಿಂದ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಯಾವುದೇ ಯೋಜನೆ ಬಂದರೂ ಅದು ಹಿಂದೂ ಸಮಾಜಕ್ಕೆ ಮಾತ್ರ ಅನ್ವಯ ಆಗೋದಿಲ್ಲ. ಸಬ್ ಕಾ ಸಾಥ್​ ಸಬ್ ಕಾ ವಿಕಾಸ್ ಇದೆ. ಯಾವುದೇ ನಿರ್ಧಾರ ಕೈಗೊಂಡರೂ ಅದರಲ್ಲಿ ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದ ಭಾವ ಇಲ್ಲ. ಎಲ್ಲರೂ ಫಲಾನುಭವಿಗಳಿದ್ದಾರೆ ಎಂದು ತಿಳಿಸಿದರು.

ಧಾರ್ಮಿಕ ಕೇಂದ್ರಗಳನ್ನು ಭಕ್ತರ ಆಕರ್ಷಣೆಯ ಸ್ಥಳವನ್ನಾಗಿ ಮಾಡಿದ್ದಾರೆ. ಇದನ್ನು ಹಿಂದುತ್ವ ಎಂದರೆ ನಾನೇನೂ ಮಾಡಲು ಆಗುವುದಿಲ್ಲ. ಅಭಿವೃದ್ಧಿ ನೋಡುವುದಾದರೆ, ವಂದೇ ಮಾತರಂ ರೈಲು ಎಲ್ಲ ಕಡೆ ಪ್ರಾರಂಭವಾಗಿದೆ. ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತದೆ. ಮನೆ ಮನೆಗೆ ನಲ್ಲಿ ನೀರು ಕೊಡುವ ಕೆಲಸ ನಡೆದಿದೆ. ಗುಜರಾತ್ ಒಂದು ಮಾಡೆಲ್, ಅದನ್ನು ಮೋದಿಯವರು ಮಾಡಿದ್ದಾರೆ. ಈ ಅಭಿವೃದ್ಧಿಯನ್ನು ಇಟ್ಟುಕೊಂಡು ನಾವು ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದರು.

ಇದನ್ನೂ ಓದಿ :ಫೊರೆನ್ಸಿಕ್ ಲ್ಯಾಬ್ ಹೆಚ್ಚಿಸಿ, ಮಧ್ಯಮ ಹಂತದ ಪೊಲೀಸರಿಗೆ ವಿಶೇಷ ತರಬೇತಿ ನೀಡಿ: ಬಸವರಾಜ ಬೊಮ್ಮಾಯಿ ಸೂಚನೆ

ABOUT THE AUTHOR

...view details