ಕರ್ನಾಟಕ

karnataka

ETV Bharat / state

ದ್ರಾಕ್ಷಿ ಮಾರಾಟಕ್ಕೆ ರೈತನಿಗೆ ವ್ಯವಸ್ಥೆ ಕಲ್ಪಿಸಿದ ಅಧಿಕಾರಿಗಳು: ಈಟಿವಿ ಭಾರತ ವರದಿ ಫಲಶ್ರುತಿ - ETV Bharat Report

ಲಾಕ್ ಡೌನ್ ಹಿನ್ನೆಲೆ ಮಾರುಕಟ್ಟೆ ಸಿಗದೆ ಬಾಗಲಕೋಟೆ ಜಿಲ್ಲೆಯ ತುಂಬರಮಟ್ಟಿ ಗ್ರಾಮದಲ್ಲಿ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಈಟಿವಿ ಭಾರತ ಪ್ರಕಟಿಸಿದ ವರದಿ ಪರಿಣಾಮ ಬೀರಿದೆ.

ETV Bharat Report impac
ಈಟಿವಿ ಭಾರತ ವರದಿ ಫಲಶ್ರುತಿ

By

Published : Apr 9, 2020, 2:42 PM IST

ಬಾಗಲಕೋಟೆ :ಸಾಮಾಜಿಕ ನಿಷೇಧದ ಈ ದಿನಗಳಲ್ಲಿ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಈಟಿವಿ ಭಾರತ ಪ್ರಕಟಿಸಿದ್ದ ವರದಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ.

ಬೀಳಗಿ ತಾಲೂಕಿನ ತುಂಬರಮಟ್ಟಿ ಗ್ರಾಮದ ಭೀಮಪ್ಪ ಹನುಮರ ಎಂಬವರ ದಾಕ್ಷಿ ತೋಟಕ್ಕೆ ಅಧಿಕಾರಿಗಳು ಭೇಟಿ ನೀಡಿದರು. ಈ ವೇಳೆ ರೈತರಿಗೆ ಮಾರುಕಟ್ಟೆ ಒದಗಿಸಲು ದಲ್ಲಾಳಿಯನ್ನು ಕರೆದುಕೊಂಡು ಬಂದು ಮಾರಾಟಕ್ಕೆ ಅನುಕೂಲ ಕಲ್ಪಿಸಿದರು.

ಇದನ್ನೂ ಓದಿ: ಮಾರುಕಟ್ಟೆಯಿಲ್ಲದೆ ದ್ರಾಕ್ಷಿ ಬೆಳೆ ನಾಶ.. ಅಳಲು ತೋಡಿಕೊಂಡ ರೈತ..

ರೈತ ಭೀಮಪ್ಪ ಹನುಮರ ತಮ್ಮ‌ಮೂರು ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆದಿದ್ದರು. ಆದರೆ ಮಾರುಕಟ್ಟೆ ಬಂದ್​ ಆದ ಪರಿಣಾಮ ಮಾರಾಟ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದರು. ಈ ಬಗ್ಗೆ ಈಟಿವಿ ಭಾರತ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಬೀಳಗಿ ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿಗಳಾದ ವಿವೇಕಾನಂದ ಕೆರೂರು ಹಾಗೂ ರುಕ್ಮಿಣಿ ಮೈತ್ರಿ ತೋಟಕ್ಕೆ ಭೇಟಿ ನೀಡಿ ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ABOUT THE AUTHOR

...view details