ಬಾಗಲಕೋಟೆ:ಹುಟ್ಟು ಹಬ್ಬವನ್ನು ಆಚರಿಸಿಕೊಂಡು ವಾಪಸ್ ಬರುವ ಸಮಯದಲ್ಲಿ ರಸ್ತೆ ಅಪಘಾತವಾಗಿ ಇಬ್ಬರು ಯವಕರು ಮೃತಪಟ್ಟಿರುವ ದಾರುಣ ಘಟನೆ ಬಾಗಲಕೋಟೆ ನಗರದ ಬಳಿ ಸಂಭವಿಸಿದೆ. ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬರುವಾಗ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಮತ್ತು ಹಿಂಬದಿ ಕುಳಿತ್ತಿದ್ದವ ಸಾವನ್ನಪ್ಪಿದ್ದಾರೆ.
ಬಾಗಲಕೋಟೆ ನಗರದ ಗದ್ದನಕೇರಿ ತಾಂಡ ಬಳಿ ಈ ಘಟನೆ ನಡೆದಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ದೇಹ ಎರಡು ತುಂಡಾಗಿದೆ. ನವನಗರದ ಸಂಗಮೇಶ(21), ಶಿರಗುಪ್ಪಿ ತಾಂಡಾದ ಕಿರಣ (21)ಮೃತರು. ಸಂಗಮೇಶನ ಜನ್ಮದಿನದ ಹಿನ್ನೆಲೆ, ಹುಟ್ಟುಹಬ್ಬದ ಪಾರ್ಟಿ ಮಾಡಿಕೊಂಡು ವಾಪಸ್ ಬರುವಾಗ ಈ ದುರಂತ ಸಂಭವಿಸಿದೆ.