ಕರ್ನಾಟಕ

karnataka

ETV Bharat / state

ನನ್ನನ್ನು ಅರೆಸ್ಟ್ ಮಾಡಿ ನೋಡೋಣ: ವಿಜಯಾನಂದ ಕಾಶಪ್ಪನವರ - ಪೊಲೀಸರ ನಡುವೆ ವಾಗ್ವಾದ!

ಬೆಂಗಳೂರಿನ ಕೋರ್ಟ್​ಗೆ ವಿಚಾರಣೆಗೆ ಹಾಜರಾಗದ ಹಿನ್ನೆಲೆ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರಿಗೆ ವಾರಂಟ್ ಜಾರಿ ಮಾಡಲಾಗಿತ್ತು. ಇತ್ತ ಮನೆಯಲ್ಲಿ ಗಲಾಟೆ, ಜಗಳ ಹಿನ್ನೆಲೆಯಲ್ಲಿ ಅಕ್ಕ ಪಕ್ಕದ ಮನೆಯವರಿಂದ ದೂರು ಬಂದ ಬೆನ್ನಲ್ಲೇ ವಿಚಾರಣೆಗಾಗಿ ಪೊಲೀಸರು ಕಾಶಪ್ಪನವರ ಗೃಹ ಕಚೇರಿಗೆ ಆಗಮಿಸಿದ್ದರು. ಆದರೆ ವಿಜಯಾನಂದ ಕಾಶಪ್ಪನವರ - ಪೊಲೀಸರ ನಡುವೆ ವಾಗ್ವಾದ ನಡೆದು ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.

arguments between vijayananda kashappanavara and police
ವಿಜಯಾನಂದ ಕಾಶಪ್ಪನವರ - ಪೊಲೀಸರ ನಡುವೆ ವಾಗ್ವಾದ!

By

Published : Jun 26, 2021, 8:17 PM IST

ಬಾಗಲಕೋಟೆ:ವಿಚಾರಣೆ ಮಾಡಲು ಬಂದ ಪೊಲೀಸರೊಂದಿಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಾಗ್ವಾದ ನಡೆಸಿರುವ ಘಟನೆ ಇಲಕಲ್ಲ ಪಟ್ಟಣದಲ್ಲಿ ನಡೆದಿದೆ.

ವಿಜಯಾನಂದ ಕಾಶಪ್ಪನವರ - ಪೊಲೀಸರ ನಡುವೆ ವಾಗ್ವಾದ!

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಗೃಹ ಕಚೇರಿಗೆ ಆಗಮಿಸಿದ ಪೊಲೀಸ್ ಅವರೊಂದಿಗೆ ಮಾತಿನ ಚಕಿಮಕಿ ನಡೆಸಿದ್ದು, ಬಂಧನ ವಾರಂಟ್ ಇಲ್ಲದೇ, ಸರ್ಚ್​​ ವಾರೆಂಟ್​​ ಇಲ್ಲದೇ ಬಂಧನ ಮಾಡಲು ಏಕೆ ಬಂದಿದ್ದೀರಿ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಬೆಂಗಳೂರಿನ ಕೋರ್ಟ್​ಗೆ ವಿಚಾರಣೆಗೆ ಹಾಜರಾಗದ ಹಿನ್ನೆಲೆ, ಕಾಶಪ್ಪನವರಿಗೆ ವಾರಂಟ್ ಜಾರಿ ಮಾಡಲಾಗಿತ್ತು. ಇತ್ತ ಮನೆಯಲ್ಲಿ ಗಲಾಟೆ, ಜಗಳ ಹಿನ್ನೆಲೆಯಲ್ಲಿ ಅಕ್ಕ ಪಕ್ಕದ ಮನೆಯವರಿಂದ ದೂರು ಬಂದ ಬೆನ್ನಲ್ಲೇ ವಿಚಾರಣೆಗಾಗಿ ಪೊಲೀಸರು ಆಗಮಿಸಿದ್ದರು. ಹುನಗುಂದ ಸಿಪಿಐ ಹೊಸಕೇರಪ್ಪ, ಇಳಕಲ್ ಪಿಎಸ್ಐ ಎಸ್.ಬಿ. ಪಾಟೀಲ, ಗ್ರಾಮೀಣ ಪಿಎಸ್ಐ ಬಸವರಾಜ್ ತಿಪ್ಪಾರೆಡ್ಡಿ ನೇತೃತ್ವದಲ್ಲಿ ವಾರಂಟ್ ಜಾರಿ ಮಾಡಲು‌ ಆಗಮಿಸಿದ್ದರು.

ಆದ್ರೆ ಅಕ್ರಮವಾಗಿ ಮನೆಗೆ ನುಗ್ಗಿದ್ದಾರೆಂದು ಪೊಲೀಸರ ವಿರುದ್ಧ ಹರಿಹಾಯ್ದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ನಾನೇನು ತಪ್ಪು ಮಾಡಿಲ್ಲ. ಯಾವ ವಾರಂಟ್ ಸಹ ಇಲ್ಲ. ನನ್ನನ್ನು ಅರೆಸ್ಟ್ ಮಾಡಿ ನೋಡೋಣ ಎಂದು ಸವಾಲ್ ಹಾಕಿದ ಕಾಶಪ್ಪನವರ ಪೊಲೀಸ್ ವಿರುದ್ಧ ಹರಿಹಾಯ್ದು, ಶಾಸಕ‌ ದೊಡ್ಡನಗೌಡ ಪಾಟೀಲ್​ ಅವರ ಕುಮ್ಮಕ್ಕಿನಿಂದಾಗಿ ಬಂಧನ ಮಾಡಲು‌ ಬಂದಿದ್ದೀರಿ ಎಂದು ಹರಿಹಾಯ್ದುರು. ತೀವ್ರ ವಾಗ್ವಾದ ನಡೆದು, ಸ್ಥಳದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ:ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಆಂಧ್ರಪ್ರದೇಶದ ಆನಂದಯ್ಯ ಆಯುರ್ವೇದಿಕ್ ಔಷಧ ವಿತರಣೆ

ವಾರಂಟ್ ಜಾರಿ ಮಾಡಲು ಪೊಲೀಸರು ತೆರಳಿದ್ದಾರೆ. ಅಲ್ಲದೇ ಅಕ್ಕ ಪಕ್ಕದ ಮನೆಯವರು, ಮನೆಯಲ್ಲಿ ಗಲಾಟೆ ಆಗಿತ್ತಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೋಗಿದ್ದಾರೆ ಎಂದು ಬಾಗಲಕೋಟೆ ಎಸ್.ಪಿ. ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details