ಬಾಗಲಕೋಟೆ: ಜಿಲ್ಲೆಯ ಡಾ. ಚಂದ್ರಕಾಂತ ಜವಳಿ ಕೊರೊನಾ ವಾರಿಯರ್ಸ್ ಆಗಿದ್ದು, ತಿಂಗಳುಗಟ್ಟಲೇ ಪತ್ನಿ, ಮಕ್ಕಳು, ತಂದೆ-ತಾಯಿಯಿಂದ ದೂರಾಗಿದ್ದಾರೆ. ಯುಗಾದಿ, ಬಸವ ಜಯಂತಿ, ಹುಣ್ಣಿಮೆ ಎನ್ನದೆ ತಿಂಗಳುಗಟ್ಟಲೆ ಕುಟುಂಬದಿಂದ ದೂರ ಇದ್ದು, ಕೇವಲ ವಿಡಿಯೋ ಕಾಲ್ ಮೂಲಕ ಕುಟುಂಬದವರನ್ನು ವಿಚಾರಿಸುತ್ತಾ ತಮ್ಮ ಕರ್ತವ್ಯ ಮೆರೆಯುತ್ತಿದ್ದಾರೆ.
ಒಂದೂವರೆ ತಿಂಗಳಿಂದ ಕುಟುಂಬದಿಂದ ದೂರ: ಕೊರೊನಾ ವಿರುದ್ಧ ಹೋರಾಡುತ್ತಿರುವ ನೋಡಲ್ ಅಧಿಕಾರಿ! - ಕೊರೊನಾ ವಾರಿಯರ್ಸ್
ಬಾಗಲಕೋಟೆ ಕೋವಿಡ್ ಆಸ್ಪತ್ರೆಯಲ್ಲಿ ನೋಡಲ್ ಅಧಿಕಾರಿಯಾಗಿರುವ ಚಂದ್ರಕಾಂತ ಜವಳಿ ಕಳೆದ ಒಂದೂವರೆ ತಿಂಗಳಿನಿಂದ ತಮ್ಮ ಕುಟುಂಬವನ್ನು ತೊರೆದು ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
ಬಾಗಲಕೋಟೆ ಕೋವಿಡ್ ಆಸ್ಪತ್ರೆಯಲ್ಲಿ ನೋಡಲ್ ಅಧಿಕಾರಿಯಾಗಿರುವ ಚಂದ್ರಕಾಂತ ಜವಳಿ ಕಳೆದ ಒಂದೂವರೆ ತಿಂಗಳಿನಿಂದ ಕೊರೊನಾ ಪ್ರಕರಣಗಳ ಮಾಹಿತಿಯ ಅಂಕಿ-ಅಂಶ ದಾಖಲಾತಿ ಕಾರ್ಯ ನಿಭಾಯಿಸುತ್ತಿದ್ದಾರೆ. ಜೊತೆಗೆ ಸೋಂಕಿತರ ಬಗ್ಗೆ ಕಾಳಜಿ ವಹಿಸಿಕೊಂಡಿದ್ದಾರೆ. ಹೀಗಾಗಿ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿರುವ ತಂದೆ, ತಾಯಿ, ಪತ್ನಿ ಮಕ್ಕಳನ್ನು ಭೇಟಿ ಮಾಡಿಲ್ಲ.
ಕೊರೊನಾ ಕರ್ತವ್ಯದಲ್ಲಿರುವ ವೈದ್ಯ ಚಂದ್ರಕಾಂತ ಕುಟುಂಬದ ಜೊತೆಗಿನ ಸಂಭ್ರಮವನ್ನು ತ್ಯಾಗ ಮಾಡಿದ್ದಾರೆ. ಕುಟುಂಬಸ್ಥರನ್ನು ಮಿಸ್ ಮಾಡಡಿಕೊಂಡಿದ್ದಕ್ಕೆ ಚಂದ್ರಕಾಂತ ಅವರು ವಿಡಿಯೊ ಕಾಲ್ ಮೂಲಕ ಕುಟುಂಬಸ್ಥರ ಕುಶಲೋಪರಿ ವಿಚಾರಿಸುತ್ತಿದ್ದಾರೆ. ಸದ್ಯ ಒಂದೂವರೆ ತಿಂಗಳಿನಿಂದ ಬಾಗಲಕೋಟೆಯ ಖಾಸಗಿ ಲಾಡ್ಜ್ನಲ್ಲಿಯೇ ಚಂದ್ರಕಾಂತ ಉಳಿದುಕೊಂಡಿದ್ದಾರೆ.