ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಕೊರೊನಾದಿಂದ ಬಾಲಕ ಸೇರಿ 6 ಮಂದಿ ಡಿಸ್ಚಾರ್ಜ್​​​​ - ಕೊರೊನಾ ವೈರಸ್​ ಅಪ್​​ಡೇಟ್​​

ಕೋವಿಡ್​​ನಿಂದ ಗುಣಮುಖರಾದ ಬಾಲಕನಿಗೆ ಜಿಲ್ಲಾ ಆಸ್ಪತ್ರೆಯ ವೈದ್ಯರು ಪ್ರಮಾಣ ಪತ್ರದ ಜೊತೆಗೆ ಡ್ರಾಯಿಂಗ್ ಪುಸ್ತಕವನ್ನೂ ವಿತರಿಸಿದರು.

6 members discharged from Corona at Balakote
ಪ್ರಮಾಣ ಪತ್ರ

By

Published : May 20, 2020, 6:11 PM IST

ಬಾಗಲಕೋಟೆ: ಜಿಲ್ಲೆಯಲ್ಲಿ ದಿನ ಐವರಿಗೆ ಕೊರೊನಾ ಸೋಂಕು ತಗುಲಿದೆ. ಇಂದು ಢಾಣಕಶಿರೂರ ಗ್ರಾಮದ ಓರ್ವ ಬಾಲಕ ಸೇರಿ ಆರು ಮಂದಿ ಕೋವಿಡ್​ನಿಂದ ಗುಣಮುಖರಾಗಿ ಬಿಡುಗಡೆಯಾದರು.

ಗುಣಮುಖರಾದವರಿಗೆ ಪ್ರಮಾಣ ಪತ್ರ ನೀಡಿದ ವೈದ್ಯರು

ಜಿಲ್ಲಾ ಸಜ್ಜನ್​​ ಡಾ. ಪ್ರಕಾಶ ಬಿರಾದಾರ, ವೈದ್ಯ ಡಾ. ಚಂದ್ರಶೇಖರ ಜವಳಿ ಹಾಗೂ ಸಿಬ್ಬಂದಿ ಗುಣಮುಖರಾದವರಿಗೆ ಚಪ್ಪಾಳೆ ತಟ್ಟಿ, ಬಿಡುಗಡೆ ಪ್ರಮಾಣ ಪತ್ರ ನೀಡಿದರು. ಒಟ್ಟು 76 ಸೋಂಕಿತರ ಪೈಕಿ 37 ಮಂದಿ ಗುಣಮುಖರಾಗಿದ್ದಾರೆ. ಬಾಲಕನಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಪ್ರಮಾಣ ಪತ್ರ ಜೊತೆಗೆ ಡ್ರಾಯಿಂಗ್ ಪುಸ್ತಕವನ್ನೂ ವಿತರಿಸಿದರು.

ಡಿಸ್ಚಾರ್ಜ್​ ಆದ ರೋಗಿಗಳು:

  1. ರೋಗಿ-680 (18 ವರ್ಷ, ಬಾಲಕಿ)
  2. ರೋಗಿ-681 (45 ವರ್ಷ, ಪುರುಷ)
  3. ರೋಗಿ-682 (55 ವರ್ಷ, ಮಹಿಳೆ)
  4. ರೋಗಿ-685 (30 ವರ್ಷ, ಮಹಿಳೆ)
  5. ರೋಗಿ-687 (40 ವರ್ಷ, ಮಹಿಳೆ)
  6. ರೋಗಿ-689 (10 ವರ್ಷ, ಬಾಲಕ)

ABOUT THE AUTHOR

...view details