ಟೋಕಿಯೋ, ಜಪಾನ್:ನಾನು ಪದಕ ಗೆದ್ದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇಡೀ ದೇಶವು ನನ್ನನ್ನು ನೋಡುತ್ತಿದೆ ಮತ್ತು ದೇಶದ ಜನತೆ ತುಂಬಾ ನಿರೀಕ್ಷೆಗಳನ್ನು ಹೊಂದಿದ್ದು, ಮೊದಲಿಗೆ ಸ್ವಲ್ಪ ಹೆದರಿದ್ದೆನು. ಆದರೆ, ದೃಢ ನಿಶ್ಚಯದಿಂದ ನನ್ನ ಅತ್ಯುತ್ತಮ ಪ್ರತಿಭೆ ತೋರಿದ್ದೇನೆ ಎಂದು ಭಾರತೀಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಪ್ರತಿಕ್ರಿಯೆ ನೀಡಿದ್ದಾರೆ.
ಟೋಕಿಯೋ ಒಲಿಂಪಿಕ್ನಲ್ಲಿ 49 ಕೆಜಿ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ನಂತರ ಮಾತನಾಡಿದ ಮೀರಾಬಾಯಿ ಚಾನು 2016ರ ರಿಯೋ ಒಲಿಂಪಿಕ್ಸ್ನಲ್ಲಿ ನಾನು ಉತ್ತಮ ಪ್ರದರ್ಶನವನ್ನು ತೋರಿಲ್ಲ. ಆದರೆ ಸಾಕಷ್ಟು ಕಲಿತುಕೊಂಡೆ, ಇದಕ್ಕಾಗಿ ನಾನು ತುಂಬಾ ಶ್ರಮಿಸಿದ್ದೇನೆ ಎಂದಿದ್ದಾರೆ.