ನವದೆಹಲಿ: 49 ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ಪುರುಷರ ಹಾಕಿ ತಂಡ ಮಂಗಳವಾರ ಬೆಲ್ಜಿಯಂ ವಿರುದ್ಧ 2-5ರಲ್ಲಿ ಸೋಲು ಕಾಣುವ ಮೂಲಕ ನಿರಾಸೆಯನುಭವಿಸಿದೆ. ಆದರೆ ಗುರುವಾರ ಕಂಚಿನ ಪದಕಕ್ಕಾಗಿ ನಡೆಯುವ ಪಂದ್ಯದಲ್ಲಿ ಭಾರತ ತಂಡ ಸೆಮಿಫೈನಲ್ನಲ್ಲಿ ಮಾಡಿದ ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ.
ಪೆನಾಲ್ಟಿ ಕಾರ್ನರ್ಸ್ ಬಿಟ್ಟುಕೊಡುವುದನ್ನು ಕಡಿಮೆ ಮಾಡಬೇಕು
ಭಾರತ ತಂಡ ಸೆಮಿಫೈನಲ್ನಲ್ಲಿ ಬೆಲ್ಜಿಯಂ ವಿರುದ್ಧ ಬರೋಬ್ಬರಿ 14 ಪೆನಾಲ್ಟಿ ಕಾರ್ನರ್ಸ್ಗೆ ಅನುವು ಮಾಡಿಕೊಟ್ಟಿತು. ಇದರಲ್ಲಿ ಎದುರಾಳಿ ತಂಡ 3 ಗೋಲು ಸಿಡಿಸಲು ಸಫಲವಾಗಿ ಟೈ ಆಗಿದ್ದ ಪಂದ್ಯವನ್ನು 5-2ರಲ್ಲಿ ಗೆದ್ದುಕೊಂಡಿತು. ಹಾಗಾಗಿ ಪದಕ ನಿರ್ಣಾಯಕ ಪಂದ್ಯದಲ್ಲಿ ಭಾರತೀಯರು ದೇಹಕ್ಕೆ ಚೆಂಡನ್ನು ತಾಗಿಸಿಕೊಳ್ಳುವುದನ್ನ ಕಡಿಮೆ ಮಾಡಬೇಕಿದೆ.
ಡಿಫೆನ್ಸ್ನಲ್ಲಿನ ತಪ್ಪುಗಳನ್ನು ಸರಿಪಡಿಸಕೊಳ್ಳಬೇಕು
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಡಿಫೆನ್ಸ್ ಅದ್ಭುತವಾಗಿತ್ತು. ಆದರೆ, ಬೆಲ್ಜಿಯಂ ವಿರುದ್ಧ ಸಂಪೂರ್ಣ ಕಳಪೆಯಾಯಿತು. ಅದರಲ್ಲೂ ಕೊನೆಯ ಕ್ವಾರ್ಟರ್ನಲ್ಲಿ ಎದುರಾಳಿ ತಂಡ ಭಾರತದ ವ್ಯಾಪ್ತಿಗೆ ಸುಲಭವಾಗಿ ದಾಳಿ ಮಾಡಿ ಸಾಕಷ್ಟು ಪೆನಾಲ್ಟಿ ಕಾರ್ನರ್ಸ್ ಪಡೆದುಕೊಂಡರು. ಹಾಗಾಗಿ ಎದುರಾಳಿಯನ್ನು ಸಮರ್ಥವಾಗಿ ತಡೆಯುವತ್ತ ಮತ್ತು ದಾಳಿ ನಡೆಸುವುದರತ್ತ ಭಾರತ ಗಮನ ಹರಿಸಬೇಕು.