ಕರ್ನಾಟಕ

karnataka

ETV Bharat / sports

Tokyo Olympics : ನಾಳೆ ಮಹಿಳಾ ಹಾಕಿ ತಂಡ, ಕಮಲ್​ ಪ್ರೀತ್, ದ್ಯುತಿ ಚಾಂದ್ ಕಣಕ್ಕೆ.. - ದ್ಯುತಿ ಚಾಂದ್

ಡಿಸ್ಕಸ್ ಎಸೆತಗಾರ್ತಿ ಕಮಲ್‌ಪ್ರೀತ್ ಕೌರ್ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಫೈನಲ್​ಗೆ ಅರ್ಹತೆ ಪಡೆದಿದ್ದಾರೆ. ನಾಳೆಯ ಪಂದ್ಯದಲ್ಲಿ ಪದಕಕ್ಕಾಗಿ ಹೋರಾಟ ಮಾಡಲಿದ್ದಾರೆ..

Tokyo Olympics
Tokyo Olympics

By

Published : Aug 1, 2021, 10:16 PM IST

ಟೋಕಿಯೊ :ಟೋಕಿಯೊ ಒಲಿಂಪಿಕ್ಸ್‌ನ 11ನೇ ದಿನದಂದು ಕಮಲ್​ ಪ್ರೀತ್​ ಮಹಿಳಾ ಡಿಸ್ಕಸ್​ ಥ್ರೋನಲ್ಲಿ ಸ್ಪರ್ಧಿಸಲಿದ್ದಾರೆ. ಮಹಿಳೆಯರ 200 ಮೀಟರ್ ಓಟದಲ್ಲಿ​ ದ್ಯುತಿ ಚಾಂದ್​​ ಭಾಗವಹಿಸಲಿದ್ದು, ಮಹಿಳಾ ಹಾಕಿ ತಂಡ ಕ್ವಾರ್ಟರ್​ ಫೈನ್​ಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಡಲಿದೆ.

ದ್ಯುತಿ ಚಾಂದ್- ಅಥ್ಲೆಟಿಕ್ಸ್ (ರನ್ನಿಂಗ್)

100 ಮೀ ಓಟದ ಆರಂಭಿಕ ಸುತ್ತಿನಲ್ಲಿ ದ್ಯುತಿ ಚಾಂದ್​ಗೆ ಓಡಲು ಸಾಧ್ಯವಾಗಿರಲಿಲ್ಲ. ಆಗಸ್ಟ್ 2ರಂದು ನಡೆಯಲಿರುವ ಟೋಕಿಯೊ 2020 ಒಲಿಂಪಿಕ್ಸ್ ಮಹಿಳಾ 200 ಮೀಟರ್ ಸ್ಪ್ರಿಂಟ್ ಹೀಟ್‌ಗಳಲ್ಲಿ ಇವರು ಭಾಗವಹಿಸಲಿದ್ದಾರೆ.

ಕಮಲ್‌ಪ್ರೀತ್ ಕೌರ್-ಅಥ್ಲೆಟಿಕ್ಸ್ (ಡಿಸ್ಕಸ್​ ಥ್ರೋ)

ಡಿಸ್ಕಸ್ ಎಸೆತಗಾರ್ತಿ ಕಮಲ್‌ಪ್ರೀತ್ ಕೌರ್ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಫೈನಲ್​ಗೆ ಅರ್ಹತೆ ಪಡೆದಿದ್ದಾರೆ. ನಾಳೆಯ ಪಂದ್ಯದಲ್ಲಿ ಪದಕಕ್ಕಾಗಿ ಹೋರಾಟ ಮಾಡಲಿದ್ದಾರೆ. 25 ವರ್ಷದ ಕೌರ್, ಬಿ ತಂಡದಲ್ಲಿದ್ದಾರೆ. 64 ಮೀಟರ್​ ಡಿಸ್ಕಸ್ ಎಸೆದಿದ್ದರಿಂದ ಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ. ಅಮೆರಿಕನ್​ ವ್ಯಾಲರಿ ಆಲ್ಮನ್​ 66.42 ಮೀಟರ್​ ಡಿಸ್ಕಸ್​ ಎಸೆದಿದ್ದು ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Tokyo Olympics : ಬ್ರಿಟನ್ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ.. ಚೆಕ್‌ ದೇ ಇಂಡಿಯಾ..

ಭಾರತ ಮಹಿಳಾ ತಂಡ - ಹಾಕಿ

ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಭಾರತದ ಮಹಿಳಾ ಹಾಕಿ ತಂಡವು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಿತು. ಎ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆದ ತಂಡವಾಗಿದೆ. ನಾಳೆ ರಾಣಿ ರಾಂಪಾಲ್ ಬಳಗವು ಗ್ರೂಪ್ ಬಿ ಅಗ್ರಸ್ಥಾನ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ABOUT THE AUTHOR

...view details