ಜೈಪುರ: ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿರುವ ಪ್ಯಾರಾ ಶೂಟರ್ ಅವನಿ ಲೇಖಾರಾ ಅವರಿಗೆ 3 ಕೋಟಿ ರೂಪಾಯಿ ಮತ್ತು ಬೆಳ್ಳಿ ಗೆದ್ದ ದೇವೇಂದ್ರ ಜಜಾರಿಯಾ ಅವರಿಗೆ 2 ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಘೋಷಿಸಿದ್ದಾರೆ.
ಸೋಮಾರ 19 ವರ್ಷದ ಜೈಪುರ ಮೂಲದ ಅವಿನ 10 ಮೀಟರ್ ಏರ್ ರೈಫಲ್ನಲ್ಲಿ ಪ್ಯಾರಾಲಿಂಪಿಕ್ಸ್ ದಾಖಲೆಯ 249.5 ಅಂಕಗಳೊಡನೆ ಚಿನ್ನ ಗೆದ್ದಿದ್ದರು. ಅಲ್ಲದೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಮತ್ತು ಒಟ್ಟಾರೆ 4ನೇ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇನ್ನು, ಪ್ಯಾರಾಲಿಂಪಿಕ್ಸ್ನಲ್ಲಿ ಎರಡು ಬಾರಿ ಚಿನ್ನ ಗೆದ್ದಿದ್ದ ದೇವೇಂದ್ರ ಜಜಾರಿಯಾ ಈ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಅವರು 2004ರ ಅಥೆನ್ಸ್ ಮತ್ತು 2016ರ ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಪಡೆದಿದ್ದರು. ಇದು ಅವರಿಗೆ ಸಂದಿರುವ 3ನೇ ಪ್ಯಾರಾಲಿಂಪಿಕ್ಸ್ ಪದಕವಾಗಿದೆ.
ಸುಂದರ್ ಸಿಂಗ್ ಗುರ್ಜಾರ್ ಕೂಡ ಜಾವಲಿನ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮತ್ತೊಬ್ಬ ಕ್ರೀಡಾಪಟುವಾಗಿದ್ದು, ಇವರಿಗೂ ಒಂದು ಕೋಟಿ ಬಹುಮಾನ ಸಿಗಲಿದೆ. ರಾಜಸ್ಥಾನ ಸರ್ಕಾರ ಹಿಂದೆಯೇ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ವಿಜೇತರಿಗೆ 3 ಕೋಟಿ ರೂ., ಬೆಳ್ಳಿ ಪದಕ ವಿಜೇತರಿಗೆ 2 ಕೋಟಿ ರೂ. ಹಾಗೂ ಕಂಚು ಪದಕ ವಿಜೇತರಿಗೆ 1 ಕೋಟಿ ನಗದು ಬಹುಮಾನ ನೀಡುವುದಾಗಿ ಘೋಷಿಸಿತ್ತು. ಜೊತೆಗೆ ಅರಣ್ಯ ಇಲಾಖೆಯಲ್ಲಿ ಪದಕ ಗೆದ್ದಿರುವ ರಾಜ್ಯದ ಈ ಮೂವರು ಕ್ರೀಡಾಪಟುಗಳನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಹುದ್ದೆಗೆ ನೇಮಿಸಲಾಗಿದೆ ಎಂದು ಸಿಎಂ ಗೆಹ್ಲೋಟ್ ತಿಳಿಸಿದ್ದರು.
ಇದನ್ನು ಓದಿ:ಪ್ಯಾರಾಲಿಂಪಿಕ್ಸ್ 'ಚಿನ್ನ' ಅವಿನ ಲೇಖಾರಾಗೆ ಆನಂದ್ ಮಹೀಂದ್ರಾ ಭರ್ಜರಿ ಗಿಫ್ಟ್