ಕರ್ನಾಟಕ

karnataka

ETV Bharat / sports

ಹಾಕಿ ತಂಡಕ್ಕೆ ಐತಿಹಾಸಿಕ ಗೆಲುವು : ಕುಣಿದು ಕುಪ್ಪಳಿಸಿದ ರೂಪಿಂದರ್ ಪಾಲ್ ಕುಟುಂಬಸ್ಥರು

ಟೋಕಿಯೊ ಒಲಿಂಪಿಕ್ಸ್​ನಲ್ಲಿ​​ ಭಾರತದ ಹಾಕಿ ತಂಡ ಕಂಚಿನ ಪದಕ ಪಡೆಯುತ್ತಿದ್ದಂತೆ, ಹಾಕಿ ಆಟಗಾರ ರೂಪಿಂದರ್ ಪಾಲ್ ಸಿಂಗ್ ಅವರ ಪಂಜಾಬ್​​ನ ಮನೆಯಲ್ಲಿ ಸಂಭ್ರಮ ಮಾಡಿತ್ತು. ಕುಟುಂಬಸ್ಥರೆಲ್ಲ ಕುಣಿದು ಕುಪ್ಪಳಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

Rupinder pal singh home celebration
ಕುಣಿದು ಕುಪ್ಪಳಿಸಿದ ರೂಪಿಂದರ್ ಪಾಲ್ ಸಿಂಗ್ ಕುಟುಂಬಸ್ಥರು

By

Published : Aug 5, 2021, 12:22 PM IST

Updated : Aug 5, 2021, 2:04 PM IST

ಫರೀದ್‌ಕೋಟ್ (ಪಂಜಾಬ್) : ಬರೋಬ್ಬರಿ 41 ವರ್ಷಗಳ ಬಳಿಕ ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್​ ಸೆಮಿಫೈನಲ್​ನಲ್ಲಿ ಕಂಚಿನ ಪದಕ ಜಯಿಸಿದೆ. ಜರ್ಮನಿ ತಂಡದ ವಿರುದ್ಧ 5-4 ಗೋಲುಗಳ ಅಂತರದಿಂದ ಐತಿಹಾಸಿಕ ಗೆಲುವು ದಾಖಲಿಸಿದೆ.

ಸೆಮಿಫೈನಲ್​ನಲ್ಲಿ ಭಾರತ ತಂಡ ಜಯಗಳಿಸುತ್ತಿದ್ದಂತೆ ಪಂಜಾಬ್​​ನ ಫರೀದ್​ ಕೋಟ್​​ನಲ್ಲಿರುವ ಡ್ರ್ಯಾಗ್-ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಕುಣಿದು ಕುಪ್ಪಳಿಸಿದ ರೂಪಿಂದರ್ ಪಾಲ್ ಸಿಂಗ್ ಕುಟುಂಬಸ್ಥರು

ಕುಟುಂಬಸ್ಥರೆಲ್ಲ ಒಟ್ಟಾಗಿ ಕುಳಿತು ಟಿವಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದರು. ಈ ವೇಳೆ ಭಾರತ ತಂಡ ಜಯಗಳಿಸುತ್ತಿದ್ದಂತೆ ಕುಟುಂಬ ಸದಸ್ಯರು ಕುಣಿದು ಕುಪ್ಪಳಿಸಿದರು. ಒಬ್ಬರನ್ನೊಬ್ಬರು ಅಪ್ಪಿಕೊಂಡು ಸಂಭ್ರಮಿಸಿದರು.

ಓದಿ : ಒಲಿಂಪಿಕ್ಸ್​ನಲ್ಲಿ ಹಾಕಿ ತಂಡಕ್ಕೆ ಗೆಲುವು: ತಂಡದ ಸದಸ್ಯರ ಮನೆಯಲ್ಲಿ ಆನಂದದ ಹೊನಲು

ಈಟಿವಿ ಭಾರತದೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡ ರೂಪಿಂದರ್ ಪಾಲ್ ಸಿಂಗ್ ಅವರ ತಾಯಿ ಮತ್ತು ಸಂಬಂಧಿಕರು ಭಾರತ ತಂಡಕ್ಕೆ ಅಭಿನಂದನೆ ಹೇಳಿದರು. ತಮ್ಮ ಮನೆ ಮಗನ ಸಾಧನೆಯ ಬಗ್ಗೆ ಹೇಳುವಾಗ ಪಾಲ್ ಕುಟುಂಬಸ್ಥರ ಕಣ್ಣಲ್ಲಿ ಆನಂದ ಭಾಷ್ಪ ತುಂಬಿತ್ತು.

Last Updated : Aug 5, 2021, 2:04 PM IST

ABOUT THE AUTHOR

...view details